Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ಬದಲಾವಣೆಯಿಲ್ಲದ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ಬದಲಾವಣೆಯಿಲ್ಲದ ಟೀಂ ಇಂಡಿಯಾ
ನಾಗ್ಪುರ , ಮಂಗಳವಾರ, 5 ಮಾರ್ಚ್ 2019 (13:08 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ.


ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲ ಏಕದಿನ ಪಂದ್ಯ ಸೋತಿದ್ದ ಆಸೀಸ್ ಈ ಪಂದ್ಯದಲ್ಲಿ ನಥನ್ ಲಿಯೋನ್ ಮತ್ತು ಶಾನ್ ಮಾರ್ಷ್ ಗೆ ಸ್ಥಾನ ನೀಡಿದೆ.

ಕಳೆದ ಬಾರಿ ಧೋನಿ ಮತ್ತು ಜಾಧವ್ ರಿಂದಾಗಿ ಚೇಸ್ ಮಾಡಿ ಟೀಂ ಇಂಡಿಯಾ ಗೆದ್ದಿತ್ತು. ಹೀಗಾಗಿ ಈ ಬಾರಿ ಮತ್ತೆ ರಿಸ್ಕ್ ತೆಗೆದುಕೊಳ್ಳಲು ನಾವು ತಯಾರಿಲ್ಲ. ಇದಕ್ಕಾಗಿಯೇ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುತ್ತಿದ್ದೇವೆ ಎಂದು ಆಸೀಸ್ ನಾಯಕ ಏರನ್ ಫಿಂಚ್ ಟಾಸ್ ಬಳಿಕ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ತಪ್ಪು ತಪ್ಪಾಗಿ ಟ್ಯಾಟೂ ಬರೆಯಿಸಿಕೊಂಡ ಹಾರ್ದಿಕ್ ಪಾಂಡ್ಯ!