Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ಟಿ20: ಹೀನಾಯ ಸೋಲು ಕಂಡ ಟೀಂ ಇಂಡಿಯಾ

ಭಾರತ-ನ್ಯೂಜಿಲೆಂಡ್ ಟಿ20: ಹೀನಾಯ ಸೋಲು ಕಂಡ ಟೀಂ ಇಂಡಿಯಾ
ವೆಲ್ಲಿಂಗ್ಟನ್ , ಬುಧವಾರ, 6 ಫೆಬ್ರವರಿ 2019 (16:01 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 80 ರನ್ ಗಳ ಹೀನಾಯ ಸೋಲು ಕಂಡಿದೆ.


ಗೆಲುವಿಗೆ 220 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.2 ಓವರ್ ಗಳಲ್ಲಿ ಕೇವಲ 139 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ನಾಯಕರಾಗಿ ಸತತ ಗೆಲುವು ಕಂಡಿದ್ದ ರೋಹಿತ್ ದಾಖಲೆ ಏಳು ಪಂದ್ಯಕ್ಕೆ ಕೊನೆಗೊಂಡಿದೆ.  ಅಲ್ಲದೆ ರನ್ ಅಂತರದಲ್ಲಿ ಭಾರತ ಬೃಹತ್ ಸೋಲಿನ ದಾಖಲೆ ಮಾಡಿತು.

ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಟೀಂ ಇಂಡಿಯಾ ಯಾವ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ವಿಕೆಟ್ ಕೀಪರ್ ಧೋನಿ 31 ಎಸೆತಗಳಲ್ಲಿ 39 ರನ್, ಶಿಖರ್ ಧವನ್ 18 ಎಸೆತಗಳಲ್ಲಿ 29 ರನ್, ವಿಜಯ್ ಶಂಕರ್ 18 ಎಸೆತಗಳಲ್ಲಿ 27 ರನ್  ಮತ್ತು ಕೃನಾಲ್ ಪಾಂಡ್ಯ 18 ಎಸೆತಗಳಲ್ಲಿ 20 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಎರಡಂಕಿ ಮೊತ್ತವನ್ನೂ ದಾಟಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಟಿ20: ನ್ಯೂಜಿಲೆಂಡ್ ರನ್ ಮಳೆಯಲ್ಲಿ ಕೊಚ್ಚಿ ಹೋದ ಟೀಂ ಇಂಡಿಯಾ