Select Your Language

Notifications

webdunia
webdunia
webdunia
webdunia

ಪಾಕ್ ವಿರುದ್ಧ ಗೆದ್ದು ದಾಖಲೆ ಮಾಡಿತು ಟೀಂ ಇಂಡಿಯಾ

ಪಾಕ್ ವಿರುದ್ಧ ಗೆದ್ದು ದಾಖಲೆ ಮಾಡಿತು ಟೀಂ ಇಂಡಿಯಾ
ದುಬೈ , ಸೋಮವಾರ, 24 ಸೆಪ್ಟಂಬರ್ 2018 (08:47 IST)
ದುಬೈ: ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮಾ ಶತಕಗಳ ನೆರವಿನಿಂದ ಟೀಂ ಇಂಡಿಯಾ ಏಷ್ಯಾ ಕಪ್ ನ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಹೊಸ ದಾಖಲೆಯನ್ನೂ ಮಾಡಿತು. ಇನ್ನೂ 126 ಬಾಲ್ ಬಾಕಿಯಿರುವಾಗಲೇ ಗೆಲುವಿಗೆ ಬೇಕಾಗಿದ್ದ 238 ರನ್ ಗಳಿಸಿದ ಭಾರತ ಈ ಮೂಲಕ ಹೆಚ್ಚು ಬಾಲ್ ಬಾಕಿ ಉಳಿಸಿಕೊಂಡು ಪಾಕ್ ವಿರುದ್ಧ ದೊಡ್ಡ ಗೆಲುವು ಸಾಧಿಸಿದ ದಾಖಲೆ ಮಾಡಿತು.

ರೋಹಿತ್ ಶರ್ಮಾ 111 ಮತ್ತು ಶಿಖರ್ ಧವನ್ 114 ರನ್ ಗಳಿಸಿ ಆರಂಭದ ವಿಕೆಟ್ ಗೆ ಬರೋಬ್ಬರಿ 210 ರನ್ ಗಳ ಜತೆಯಾಟವಾಡಿದರು. ಈ ಮೂಲಕ ದಾಖಲೆಯ ಜತೆಯಾಟವಾಡಿದರು. ಅಂತಿಮವಾಗಿ ಗೆಲುವಿನ ಹೊಸ್ತಿಲಿನಲ್ಲಿದ್ದಾಗ ಧವನ್ ಔಟಾದ ಕಾರಣ ಅಂಬುಟಿ ರಾಯುಡು ಕಣಕ್ಕಿಳಿಯಬೇಕಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್: ಟೀಂ ಇಂಡಿಯಾ ವಿರುದ್ಧ ಶಪಥ ಮಾಡಿದ ಬೌಲರ್ ನನ್ನೇ ಹೊರಗಿಟ್ಟ ಪಾಕಿಸ್ತಾನ