Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾಳ ಕೈ ಹಿಡಿದೇ ತವರಿಗೆ ಮರಳಿದ ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾಳ ಕೈ ಹಿಡಿದೇ ತವರಿಗೆ ಮರಳಿದ ವಿರಾಟ್ ಕೊಹ್ಲಿ
ಮುಂಬೈ , ಶನಿವಾರ, 28 ಮಾರ್ಚ್ 2015 (16:32 IST)
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ಟೀಂ ಇಂಡಿಯಾ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಇತರ ಸದಸ್ಯರೊಂದಿಗೆ ತವರಿಗೆ ವಾಪಸಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಬಾಲಿವುಡ್ ಅನುಷ್ಕಾ ಶರ್ಮಾಳ ಕೈ ಹಿಡಿದು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದೆ.

ಮಹೇಂದ್ರ ಸಿಂಗ್ ಧೋನಿ ದೆಹಲಿಗೆ ವಾಪಸಾಗಿದ್ದರೆ ಕೊಹ್ಲಿ ಮತ್ತು ಅನುಷ್ಕಾ ಸೇರಿದಂತೆ ಇತರ ಐವರು ಆಟಗಾರರು ಹಾಗೂ ತಂಡದ ನಿರ್ದೇಶಕ ರವಿ ಶಾಸ್ತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿಳಿದರು.

ರೋಹಿತ್ ಶರ್ಮಾ, ಅಜಿಂಕ್ಯ ರೆಹಾನೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡಾ ಮುಂಬೈಗೆ ಮರಳಿದ್ದಾರೆ.

ಇತರ ಕ್ರಿಕೆಟಿಗರು ಇಂದು ರಾತ್ರಿ ಭಾರತಕ್ಕೆ ಮರಳುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Share this Story:

Follow Webdunia kannada