ಸಚಿನ್-ಸೆಹ್ವಾಗ್ ದಾಖಲೆ ಮುರಿದ ರೋಹಿತ್-ಧವನ್ ಜೋಡಿ

ಮಂಗಳವಾರ, 30 ಅಕ್ಟೋಬರ್ 2018 (09:07 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಹೊಸ ದಾಖಲೆಯೊಂದನ್ನು ಮಾಡಿದೆ.
 

ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಗಂಗೂಲಿ ಮತ್ತು ಸಚಿನ್ 136 ಇನಿಂಗ್ಸ್ ಗಳಿಂದ 6609 ರನ್ ಗಳಿಸಿ ಯಶಸ್ವಿ ಆರಂಭಿಕರೆನಿಸಿದ್ದರು. ಇದೀಗ ಆ ದಾಖಲೆಯ ಪಟ್ಟಿಯಲ್ಲಿ ಧವನ್-ರೋಹಿತ್ ಜೋಡಿ ದ್ವಿತೀಯ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನದಲ್ಲಿದ್ದ ಸೆಹ್ವಾಗ್-ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್-ಧವನ್ ಜೋಡಿ ಮೊದಲ ವಿಕೆಟ್ ಗೆ 71 ರನ್ ಪೇರಿಸಿತ್ತು. ಇದರೊಂದಿಗೆ ಈ ಜೋಡಿ ಆರಂಭಿಕರಾಗಿ 3920 ರನ್ ಮಾಡಿತು. ಇದಕ್ಕೂ ಮೊದಲು ಸಚಿನ್ ಸೆಹ್ವಾಗ್ ಜೋಡಿ 3919 ರನ್ ಗಳೊಂದಿಗೆ ದ್ವಿತೀಯ ಯಶಸ್ವಿ ಆರಂಭಿಕ ಸ್ಥಾನದಲ್ಲಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಬ್ಯಾಟಿಂಗ್ ನಲ್ಲಿ ವಿಶ್ವದಾಖಲೆ ಮಾಡಿದ ಬಳಿಕ ಫೀಲ್ಡಿಂಗ್ ನಲ್ಲೂ ಹೀರೋ ಆದ ರೋಹಿತ್ ಶರ್ಮಾ