Select Your Language

Notifications

webdunia
webdunia
webdunia
webdunia

ಕೊನೆಗೂ ಹಳೆಯ ಎದುರಾಳಿ ವಿರುದ್ಧ ಸೇಡು ತೀರಿಸಿಕೊಂಡ ಪಿವಿ ಸಿಂಧು

ಕೊನೆಗೂ ಹಳೆಯ ಎದುರಾಳಿ ವಿರುದ್ಧ ಸೇಡು ತೀರಿಸಿಕೊಂಡ ಪಿವಿ ಸಿಂಧು
ನವದೆಹಲಿ , ಭಾನುವಾರ, 16 ಡಿಸೆಂಬರ್ 2018 (12:42 IST)
ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಕೊನೆಗೂ ಇದುವರೆಗೆ ತಮಗೆ ಕಂಟಕವಾಗಿದ್ದ ಖ್ಯಾತ ತಾರೆ ನೊಜೊಮಿ ಒಕುಹಾರ ವಿರುದ್ಧ ಗೆಲುವು ದಾಖಲಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಚಾಂಪಿಯನ್ ಆಗಿದ್ದಾರೆ.


ಫೈನಲ್ ನಲ್ಲಿ ಒಕುಹಾರ ವಿರುದ್ಧ 21-19, 21-17 ಅಂತರದಿಂದ ಗೆಲುವು ಸಾಧಿಸಿದ ಸಿಂಧೂ ಹಲವು ದಿನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಂಧು ಫಾರ್ಮ್ ಕೊಂಚ ತಗ್ಗಿತ್ತು. ಇದೀಗ ಅವರು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

ಈ ಮೂಲಕ ವಿಶ್ವ ಟೂರ್ ಫೈನಲ್ಸ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿ ಸಿಂಧು ಅವರದ್ದಾಗಿದೆ. ಕಳೆದ ಬಾರಿ ಸಿಂಧು ಇದೇ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಯ ಶತಕದ ಬೆನ್ನೇರಿ ಹೊರಟ ಟೀಂ ಇಂಡಿಯಾಗೆ ಶಾಕ್