Select Your Language

Notifications

webdunia
webdunia
webdunia
webdunia

ಭಾರತ ವಿರುದ್ಧದ ಪಾಕಿಸ್ತಾನದ ಪಂದ್ಯದಲ್ಲಿ ಭಾರತವೇ ಫೇವರಿಟ್ ಎಂದ ಭಜ್ಜಿ..!!

ಭಾರತ ವಿರುದ್ಧದ ಪಾಕಿಸ್ತಾನದ ಪಂದ್ಯದಲ್ಲಿ ಭಾರತವೇ ಫೇವರಿಟ್ ಎಂದ ಭಜ್ಜಿ..!!
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2018 (19:23 IST)
ಇಂದಿನ ಭಾರತ ವಿರುದ್ಧದ ಪಾಕಿಸ್ತಾನದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತವೇ ಫೇವರಿಟ್ ಎಂದು ಹರಭಜನ್ ಟೀಂ ಇಂಡಿಯಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಭಾರತ ತಂಡದ ಬೆನ್ನೆಲುಬಾಗಿರುವ ವಿರಾಟ್ ಕೊಹ್ಲಿಯ ಅಲಭ್ಯತೆಯ ನಡುವೆಯೂ ಪಾಕಿಸ್ತಾನವನ್ನು ಸೋಲಿಸುವ ಶಕ್ತಿ ಭಾರತ ಕ್ರಿಕೆಟ್ ತಂಡಕ್ಕಿದೆ ಎನ್ನುವುದು ಭಜ್ಜಿಯ ಅಭಿಪ್ರಾಯವಾಗಿದೆ.
ಸಲಾಮ್ ಕ್ರಿಕೆಟ್ 2018 ರ ಸಭೆಯಲ್ಲಿ ಉಪಸ್ತಿತರಿದ್ದ ಹರಭಜನ್ ಟೀಂ ಇಂಡಿಯಾ ಏಷ್ಯಾಕಪ್ ಗೆಲ್ಲುವ ಫೇವರಿಟ್ ಎಂದಿದ್ದಾರೆ. "ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿಯೂ ಸಹ ಭಾರತ ಫೇವರಿಟ್ ಆಗಿದೆ. ಭಾರತದ ಬ್ಯಾಟಿಂಗ್ ಉತ್ತಮವಾಗಿದೆ. ಏಷ್ಯಾದ ಪರಿಸ್ಥಿತಿಗಳಲ್ಲಿ, ಭಾರತದ ಬ್ಯಾಟ್‌ಮೆನ್‌ಗಳನ್ನು ಔಟ್ ಮಾಡುವುದು ಕಷ್ಟ. ಕೇವಲ ಅವರ ಬ್ಯಾಟಿಂಗ್ ಅಲ್ಲ ಅವರ ಬೌಲಿಂಗ್‌ನಲ್ಲಿಯೂ ಆಳವಿದೆ. ಕುಲದೀಪ್ ಯಾದವ್ ಭಾರತಕ್ಕೆ ಟ್ರಂಪ್ ಕಾರ್ಡ್ ಆಗಲಿದ್ದಾರೆ" ಎಂದು ತಮ್ಮ ಅಭಿಪ್ರಾಯವನ್ನು ಬಜ್ಜಿ ತಿಳಿಸಿದ್ದಾರೆ.
 
ವಿರಾಟ್ ಕೊಹ್ಲಿಯ ಅಲಭ್ಯತೆಯಿಂದಾಗಿ ರೋಹಿತ್ ಶರ್ಮಾ ಏಷ್ಯಾ ಕಪ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ 2018 ರ ನಿದಾಹಾಸ್ ಟ್ರೋಫಿಯಲ್ಲಿ ರೋಹಿತ್ ನಾಯಕನಾಗಿ ಭಾರತದ ತಂಡವನ್ನು ಮುನ್ನಡೆಸಿದ್ದಲ್ಲದೇ ಗೆಲುವನ್ನೂ ತಂದುಕೊಟ್ಟಿದ್ದಾರೆ. ಇಂದಿನ ಭಾರತ ಮತ್ತು ಪಾಕಿಸ್ಥಾನದ ಪಂದ್ಯ ಮುಖ್ಯವಾಗಿದ್ದು ಅದಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾದುನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಇಂಡೋ-ಪಾಕ್ ಕದನಕ್ಕೆ ಮಹತ್ವದ ಬದಲಾವಣೆ ಮಾಡಿದ ಟೀಂ ಇಂಡಿಯಾ