Select Your Language

Notifications

webdunia
webdunia
webdunia
webdunia

ಭಾರತದ ಹಾಕಿಯ ಮಾಂತ್ರಿಕ ಆಟಗಾರ ಮೊಹಮ್ಮದ್ ಶಾಹಿದ್ ಇನ್ನಿಲ್ಲ

ಭಾರತದ ಹಾಕಿಯ ಮಾಂತ್ರಿಕ ಆಟಗಾರ ಮೊಹಮ್ಮದ್ ಶಾಹಿದ್ ಇನ್ನಿಲ್ಲ
ನವದೆಹಲಿ: , ಬುಧವಾರ, 20 ಜುಲೈ 2016 (12:25 IST)
ಭಾರತದ ಹಾಕಿಯಲ್ಲಿ ಅತೀ ದೊಡ್ಡ ಹೆಸರು ಮತ್ತು 1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ತಂಡದ ಭಾಗವಾಗಿದ್ದ ಮೊಹಮ್ಮದ್ ಶಾಹಿದ್ ಲಿವರ್ ಮತ್ತು ಮೂತ್ರಪಿಂಡ ವೈಫಲ್ಯದಿಂದ ಇಲ್ಲಿನ ಗುರಗಾಂವ್ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 56 ವರ್ಷಗಳಾಗಿತ್ತು.

 1980ರ ದಶಕದಲ್ಲಿ ಫಾರ್ವರ್ಡ್ ಆಟಗಾರರಾಗಿ ಅಪೂರ್ವ ಪ್ರತಿಭಾಶಾಲಿಯಾಗಿದ್ದ ಶಾಹಿತ್ ಅವರನ್ನು ಹೊಟ್ಟೆ ನೋವಿನ ಕಾರಣದಿಂದ ಜೂನ್ 29ರಂದು ಬನಾರಸ್ ಹಿಂದು ವಿವಿಯ ಎಸ್‌ಎಸ್‌ಎಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಅವರನ್ನು ನವದೆಹಲಿಯ ಗುರಗಾಂವ್ ಮೇದಾಂತ ಮೆಂಡಿಸಿಟಿ ಆಸ್ಪತ್ರೆಗೆ ಸೇರಿಸಲಾಯಿತು. ಮೂರು ವಾರಗಳ ಬಳಿಕ ಜುಲೈ 20ರಂದು ಅವರು ಇಹಲೋಕ ತ್ಯಜಿಸಿದರು. ಅವರು ಪತ್ನಿ ಪರ್ವೀನ್ ಶಾಹಿತ್ ಮತ್ತು ಅವಳಿ ಮಕ್ಕಳಾದ ಮೊಹಮ್ಮದ್ ಸಾಯಿಫ್ ಮತ್ತು ಹೀನಾ ಶಾಹಿದ್‌ರನ್ನು ಅಗಲಿದ್ದಾರೆ.
 
 1960ರ ಏಪ್ರಿಲ್ 14ರಂದು ಉತ್ತರಪ್ರದೇಶದಲ್ಲಿ ಜನಿಸಿದ ಶಾಹಿದ್ ಕಿರಿಯರ ವಿಶ್ವಕಪ್‌ನಲ್ಲಿ 19 ವರ್ಷ ವಯಸ್ಸಿನಲ್ಲೇ ಫ್ರಾನ್ಸ್ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಹಾಕಿ ಕ್ಷೇತ್ರಕ್ಕೆ ಪ್ರವೇಶಿಸಿದರು.
 
 ಶಾಹಿದ್ ಆಡುವ ಶೈಲಿಯು ವೇಗ ಮತ್ತು ಚೆಂಡನ್ನು ಅಪರೂಪದ ಕೌಶಲ್ಯದಿಂದ ದೂಡುವ ಸಾಮರ್ಥ್ಯವನ್ನು ಆಧರಿಸಿದ್ದು, ಈ ಅಂಶವು  ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಟ್ಟಿತ್ತು. 1983ರಲ್ಲಿ ಕ್ರಿಕೆಟ್‌ನಲ್ಲಿ ವಿಶ್ವ ಕಪ್ ಜಯದ ಬಳಿಕ ಕ್ರಿಕೆಟ್‌ನ ವಿಪುಲ ಜನಪ್ರಿಯತೆ ನಡುವೆ ಹಾಕಿಯಲ್ಲಿ ಜನರ ಆಸಕ್ತಿ ಕ್ಷೀಣಿಸಿದಾಗ ಅದಕ್ಕೆ ಚೇತರಿಕೆ ನೀಡಿದ್ದರು. ರಿಯೊ ಒಲಿಂಪಿಕ್ಸ್‌ಗೆ ಹಾಕಿ ಟೀಂ ನಾಯಕ ಶ್ರೀಜೇಶ್, ಇದು ಭಾರತದ ಹಾಕಿಗೆ ತುಂಬಲಾಗದ ನಷ್ಟ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಯನಲ್ ಮೆಸ್ಸಿ ಭೇಟಿಗೆ ಸಮುದ್ರದಲ್ಲಿ ಒಂದು ಕಿಮೀ ದೂರ ಈಜಿದ ಅಭಿಮಾನಿ