Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ತೃತೀಯ ಟಿ20 ಇಂದು: ಮಳೆ ಬಂದರೆ ಅನ್ಯಾಯವಾಗಿ ಭಾರತಕ್ಕೆ ಸರಣಿ ಸೋಲು

ಭಾರತ-ಆಸ್ಟ್ರೇಲಿಯಾ ತೃತೀಯ ಟಿ20 ಇಂದು: ಮಳೆ ಬಂದರೆ ಅನ್ಯಾಯವಾಗಿ ಭಾರತಕ್ಕೆ ಸರಣಿ ಸೋಲು
ಸಿಡ್ನಿ , ಭಾನುವಾರ, 25 ನವೆಂಬರ್ 2018 (09:25 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ನಡೆದ ಎರಡು ಟಿ20 ಪಂದ್ಯಗಳಲ್ಲೂ ಮಳೆಯದ್ದೇ ಕಾರುಬಾರು. ಇದರಿಂದಾಗಿ ಅನ್ಯಾಯವಾಗಿರುವುದು ಮಾತ್ರ ಭಾರತಕ್ಕೆ.

ಇಂದು ಮೂರನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು, ಮತ್ತೆ ಮಳೆ ಬಂದರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಡಕ್ ವರ್ತ್ ಲೂಯಿಸ್ ನಿಯಮದ ಕೃಪೆಯಿಂದಾಗಿ ಆಸೀಸ್ ಮೊದಲ ಪಂದ್ಯವನ್ನು ಗೆದ್ದಿದೆ.

ದ್ವಿತೀಯ ಪಂದ್ಯ ಸಂಪೂರ್ಣವಾಗಿ ರದ್ದಾಗಿತ್ತು. ಇದರಿಂದಾಗಿ ಟೀಂ ಇಂಡಿಯಾಕ್ಕೆ ಸತತ ಏಳು ಟಿ20 ಸರಣಿ ಗೆಲುವಿನ ಸರಪಳಿ ಕಳಚಿತ್ತು. ಹಾಗಿದ್ದರೂ ಇಂದು ಮೂರನೇ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲ ಸಾಧಿಸಿದ ಸಮಾಧಾನವಾದರೂ ಇರುತ್ತದೆ.

ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಒಂದು ವೇಳೆ ಮಳೆ ಬಾರದೇ ಹೋಗಿದ್ದರೆ ಆ ಪಂದ್ಯವನ್ನು ಭಾರತ ಗೆಲ್ಲಬಹುದಾಗಿತ್ತು. ಇಂದು ಮತ್ತೆ ಅಂತಹದ್ದೇ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಗೆಲುವು ಸಾಧಿಸುವ ಉತ್ಸಾಹದಲ್ಲಿ ಕೊಹ್ಲಿ ಪಡೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

2011 ರ ವಿಶ್ವಕಪ್ ಫೈನಲ್ ನ ರಹಸ್ಯವೊಂದನ್ನು ಬಿಚ್ಚಿಟ್ಟ ಧೋನಿ!