Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾರನ್ನು ಹೊಗಳಿದ್ದ ಹರ್ಭಜನ್ ಸಿಂಗ್ ಇಂದು ವರಸೆಯೇ ಬದಲು!

ರೋಹಿತ್ ಶರ್ಮಾರನ್ನು ಹೊಗಳಿದ್ದ ಹರ್ಭಜನ್ ಸಿಂಗ್ ಇಂದು ವರಸೆಯೇ ಬದಲು!
ಮುಂಬೈ , ಶುಕ್ರವಾರ, 26 ಅಕ್ಟೋಬರ್ 2018 (09:02 IST)
ಮುಂಬೈ: ವಿಶಾಖಪಟ್ಟಣದಲ್ಲಿ ನಡೆದಿದ್ದ ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿ ವಿಶ್ವದಾಖಲೆ ಮಾಡಿದ ಮೇಲೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವರಸೆಯೇ ಬದಲಾಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿ ಇಬ್ಬರೂ ಶತಕ ಗಳಿಸಿದ್ದರು. ಆದರೆ ರೋಹಿತ್ ರ ಇನಿಂಗ್ಸ್ ನೋಡಿ ಕೊಹ್ಲಿಗಿಂತಲೂ ಹೆಚ್ಚು ಟ್ಯಾಲೆಂಟೆಡ್ ರೋಹಿತ್ ಎಂದಿದ್ದ ಭಜಿ ಇದೀಗ ಕೊಹ್ಲಿಯೇ ಭಾರತದ ದೊಡ್ಡ ಲೆಜೆಂಡ್ ಕ್ರಿಕೆಟಿಗ ಎಂದು ಹೊಗಳಿದ್ದಾರೆ. ಆ ಮೂಲಕ ತಮ್ಮ ವರಸೆಯೇ ಬದಲಿಸಿದ್ದಾರೆ.

ಸಚಿನ್, ದ್ರಾವಿಡ್, ಗಂಗೂಲಿಯವರ ದಾಖಲೆ ಹಿಂದಿಕ್ಕಿದ ಕೊಹ್ಲಿ ಈಗ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿರುವ ಲೆಜೆಂಡ್ ಎಂದು ಭಜಿ ಟ್ವೀಟ್ ಮೂಲಕ ಟೀಂ ಇಂಡಿಯಾ ನಾಯಕನನ್ನು ಹಾಡಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹಳಿ ತಪ್ಪಿದ ಟೀಂ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಹೊಸ ಸೇರ್ಪಡೆ