Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದನ್ನು ವಿರೋಧಿಸಿದ್ದ ಮತ್ತೊಬ್ಬರು ಯಾರು ಗೊತ್ತೇ?!

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದನ್ನು ವಿರೋಧಿಸಿದ್ದ ಮತ್ತೊಬ್ಬರು ಯಾರು ಗೊತ್ತೇ?!
ಮುಂಬೈ , ಶನಿವಾರ, 3 ನವೆಂಬರ್ 2018 (08:28 IST)
ಮುಂಬೈ: ಅನಿಲ್ ಕುಂಬ್ಳೆ ರಾಜೀನಾಮೆ ಬಳಿಕ ಟೀಂ ಇಂಡಿಯಾ ಹೊಸ ಕೋಚ್ ಹುಡುಕಾಟದಲ್ಲಿದ್ದಾಗ ಕೋಚ್ ಆಯ್ಕೆ ಸಮಿತಿ ಸದಸ್ಯರಾದ ಸೌರವ್ ಗಂಗೂಲಿಗೆ ರವಿಶಾಸ್ತ್ರಿ ಕೋಚ್ ಆಗುವುದು ಇಷ್ಟವಿರಲಿಲ್ಲ.

ಆದರೆ ಗಂಗೂಲಿ ಜತೆಗೆ ಇನ್ನೊಬ್ಬರಿಗೂ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದು ಇಷ್ಟವಿರಲಿಲ್ಲವಂತೆ. ಅದು ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾಗಿದ್ದ ಡಿಯಾನಾ ಎಡುಲ್ಜಿ ಅವರಿಗೆ.

ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದೇ ಕಡೇ ಕ್ಷಣದಲ್ಲಿ. ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ನಿಗದಿಪಡಿಸಿತ್ತು. ಆದರೆ ರವಿಶಾಸ್ತ್ರಿ ಗಡುವು ಮುಗಿದ ಮೇಲೆ ಅರ್ಜಿ ಸಲ್ಲಿಸಿದ್ದರು. ಈ ಕಾರಣಕ್ಕೆ ಅವರ ಅರ್ಜಿಯನ್ನು ಪರಿಗಣಿಸುವುದು ಡಿಯಾನಾ ಎಡುಲ್ಜಿ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆದರೆ ಕೊನೆಗೂ ಶಾಸ್ತ್ರಿಯೇ ಕೋಚ್ ಆದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ಪುತ್ರನಿಗೆ ಪಾಕ್ ಪೌರತ್ವ ಯಾಕಿಲ್ಲ ಗೊತ್ತಾ?