Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಆಟಗಾರರಿಗೆ ಬಸ್ ಚಾಲಕನಾಗಿದ್ದ ಧೋನಿ!

ಟೀಂ ಇಂಡಿಯಾ ಆಟಗಾರರಿಗೆ ಬಸ್ ಚಾಲಕನಾಗಿದ್ದ ಧೋನಿ!
ಮುಂಬೈ , ಸೋಮವಾರ, 19 ನವೆಂಬರ್ 2018 (08:50 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿದ್ದ ಧೋನಿ ಕೆಲವು ವಿಶೇಷ, ಅಚ್ಚರಿಯ ನಿರ್ಧಾರಗಳಿಂದ ಖ್ಯಾತರಾಗಿದ್ದರು. ಆದರೆ ಅವರು ಟೆಸ್ಟ್ ತಂಡಕ್ಕೆ ನಾಯಕರಾದ ದಿನ ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ಬಸ್ ಚಾಲಕರಾಗಿದ್ದರಂತೆ!

ಈ ವಿಚಾರವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ. 2008 ರಲ್ಲಿ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತರಾದ ದಿನ ಟೆಸ್ಟ್ ಕ್ರಿಕೆಟ್ ತಂಡಕ್ಕೂ ಧೋನಿ ಅಧಿಕೃತವಾಗಿ ನಾಯಕರಾದಾಗ ಬಸ್ ಚಲಾಯಿಸಿದ್ದರಂತೆ.

ಆ ದಿನ ನಾಗ್ಪುರದಲ್ಲಿ ಪಂದ್ಯ ಮುಗಿದ ಬಳಿಕ ಧೋನಿ ಅನಿಲ್ ಕುಂಬ್ಳೆಯನ್ನು ಭುಜದ ಮೇಲೆ ಹೊತ್ತು ಮೈದಾನಕ್ಕೆ ಸುತ್ತು ಹೊಡೆದಿದ್ದರು. ಬಳಿಕ ತಂಡ ಹೋಟೆಲ್ ರೂಂಗೆ ಮರಳುವಾಗ ಸ್ವತಃ ತಾವೇ ಬಸ್ ಚಾಲಕರಾದರಂತೆ. ನಾಯಕನಾದವನು ಬಸ್ ಚಾಲಕನಾಗಿದ್ದನ್ನು ನನ್ನ ಕಣ್ಣುಗಳಿಗೇ ನಂಬಲಾಗಲಿಲ್ಲ. ಆದರೆ ಧೋನಿ ಇಂತಹ ಹಲವು ಅಚ್ಚರಿಗಳನ್ನು ನಮಗೆ ನೀಡುತ್ತಲೇ ಇರುತ್ತಾರೆ ಎಂದು ವಿವಿಎಸ್ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಆಟಗಾರರಿಗೆ ವಿರಾಟ್ ಕೊಹ್ಲಿಯನ್ನು ಎದುರಿಸಲು ದ.ಆಪ್ರಿಕಾ ನಾಯಕ ಫಾ ಡು ಪ್ಲೆಸಿಸ್ ಪಾಠ