ಚೇತೇಶ್ವರ ಪೂಜಾರ ಅವರ ದ್ರಾವಿಡ್ ಮಾದರಿಯ ಶತಕದೊಂದಿಗೆ ದಿನದಾಟ ಮುಗಿಸಿದ ಟೀಂ ಇಂಡಿಯಾ

ಗುರುವಾರ, 6 ಡಿಸೆಂಬರ್ 2018 (13:10 IST)
ಅಡಿಲೇಡ್: ಟೆಸ್ಟ್ ಇನಿಂಗ್ಸ್ ಎಂದರೆ ಹೇಗಿರಬೇಕು ಎಂಬುದನ್ನು ರಾಹುಲ್ ದ್ರಾವಿಡ್ ಹಿಂದೆಯೇ ಮಾಡಿ ತೋರಿಸಿದ್ದಾರೆ. ಇಂದು ಅದೇ ದ್ರಾವಿಡ್ ರನ್ನು ನೆನಪಿಸುವಂತೆ ಇನಿಂಗ್ಸ್ ಕಟ್ಟಿ ಶತಕ ಗಳಿಸಿದ ಚೇತೇಶ್ವರ ಪೂಜಾರ ಟೀಂ ಇಂಡಿಯಾದ ಮಾನ ಉಳಿಸಿದರು.


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಮುಗಿದಿದ್ದು, ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ. ಒಂದು ಹಂತದಲ್ಲಿ ನೂರು ರನ್ ಒಳಗೇ ಆಲೌಟ್ ಆಗುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಚೇತೇಶ್ವರ ಪೂಜಾರ ತಾಳ್ಮೆಯ ಆಟವಾಡಿ ಆಧಾರವಾದರು.

ದ್ರಾವಿಡ್ ರಂತೇ ತಾಳ್ಮೆಯಿಂದ ಸಾಕಷ್ಟು ಬಾಲ್ ಎದುರಿಸಿ ಇನಿಂಗ್ಸ್ ಕಟ್ಟಿದ ಪೂಜಾರ ದಿನದಂತ್ಯಕ್ಕೆ 246 ಎಸೆತಗಳಿಂದ 123 ರನ್ ಗಳಿಸಿ ಔಟಾದರು. ಇಂದು ಇಡೀ ದಿನ ಅವರು ಬ್ಯಾಟಿಂಗ್ ನಡೆಸದೇ ಹೋಗಿದ್ದರೆ ಭಾರತದ ಮಾನ ಹರಾಜಾಗುತ್ತಿತ್ತು. ಪೂಜಾರಗೆ ಕೊಂಚ ಹೊತ್ತು ಜತೆಯಾದ ರವಿಚಂದ್ರನ್ ಅಶ್ವಿನ್ 76 ಎಸೆತ ಎದುರಿಸಿ 25 ರನ್ ಗಳಿಸಿದರು. ದಿನದಂತ್ಯಕ್ಕೆ ಮೊಹಮ್ಮದ್ ಶಮಿ 6 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ನಾಳೆ ಜಸ್ಪ್ರೀತ್ ಬುಮ್ರಾ ಜತೆಗೆ ಭಾರತದ ಇನಿಂಗ್ಸ್ ಎಷ್ಟು ಹೊತ್ತು ಮುಂದುವರಿಯುತ್ತದೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING