Select Your Language

Notifications

webdunia
webdunia
webdunia
webdunia

ಧೋನಿ ಬೆಸ್ಟ್ ಅಲ್ಲ ಎಂದ ಆಸ್ಟ್ರೇಲಿಯಾ ನಾಯಕನಿಗೆ ಜೋಸ್ ಬಟ್ಲರ್ ನಿಂದಲೇ ಟಾಂಗ್!

ಧೋನಿ ಬೆಸ್ಟ್ ಅಲ್ಲ ಎಂದ ಆಸ್ಟ್ರೇಲಿಯಾ ನಾಯಕನಿಗೆ ಜೋಸ್ ಬಟ್ಲರ್ ನಿಂದಲೇ ಟಾಂಗ್!
ನವದೆಹಲಿ , ಮಂಗಳವಾರ, 26 ಜೂನ್ 2018 (10:54 IST)
ನವದೆಹಲಿ: ಏಕದಿನ ಕ್ರಿಕೆಟ್ ನಲ್ಲಿ ಧೋನಿಗಿಂತಲೂ ಇಂಗ್ಲೆಂಡ್ ನ ಜೋಸ್ ಬಟ್ಲರ್ ಬೆಸ್ಟ್ ಎಂದಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೆಯ್ನ್ ಗೆ ಈಗ ಬಟ್ಲರ್ ನಿಂದಲೇ ಮುಖಕ್ಕೆ ಹೊಡೆದಂತಹ ಹೇಳಿಕೆ ಸಿಕ್ಕಿದೆ.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಶತಕ ಗಳಿಸಿದ್ದ ಬಟ್ಲರ್ ನನ್ನು ಟಿಮ್ ಪೇಯ್ನ್ ಧೋನಿಗಿಂತಲೂ ಬೆಸ್ಟ್ ಎಂದಿದ್ದರು. ಆದರೆ ಬಟ್ಲರ್ ಇದೀಗ ಧೋನಿಯ ಪ್ರೇರಣೆಯಿಂದ ಆ ರೀತಿ ಆಡಿದೆ ಎನ್ನುವ ಮೂಲಕ ಪೇಯ್ನ್ ಗೆ ಟಾಂಗ್ ಕೊಟ್ಟಿದ್ದಾರೆ.

‘ಆ ಸಂದರ್ಭದಲ್ಲಿ ಒತ್ತಡದ ಸಂದರ್ಭದಲ್ಲಿ ಧೋನಿ ಹೇಗೆ ಯೋಚಿಸುತ್ತಾರೆ ಎಂದು ಆಲೋಚನೆ ಮಾಡಿದೆ. ಅವರು ಕೂಲ್ ಆಗಿರುತ್ತಾರೆ. ಟೆನ್ ಷನ್ ತೋರಿಸಿಕೊಳ್ಳುವುದಿಲ್ಲ. ಅದನ್ನೇ ನಾನು ಮಾಡಿ ಯಶಸ್ಸು ಗಳಿಸಿದೆ’ ಎಂದು ಬಟ್ಲರ್ ಹೇಳಿದ್ದಾರೆ. ಆ ಮೂಲಕ ಧೋನಿಗೆ ಗೌರವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗಿಂತಲೂ ಜೋಸ್ ಬಟ್ಲರ್ ಬೆಟರ್ ಎಂದ ಈ ಕ್ರಿಕೆಟಿಗ ಯಾರು ಗೊತ್ತಾ?!