Select Your Language

Notifications

webdunia
webdunia
webdunia
webdunia

ನವೆಂಬರ್ 9ರ ನಂತರ 2 ಕ್ರಿಕೆಟ್ ತಂಡಗಳಿಗೆ ಬಿಡ್ಡಿಂಗ್

ನವೆಂಬರ್ 9ರ ನಂತರ 2 ಕ್ರಿಕೆಟ್  ತಂಡಗಳಿಗೆ ಬಿಡ್ಡಿಂಗ್
ನವದೆಹಲಿ , ಗುರುವಾರ, 29 ಅಕ್ಟೋಬರ್ 2015 (17:23 IST)
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಜತೆ 6 ಐಪಿಎಲ್ ಫ್ರಾಂಚೈಸಿ ಪ್ರತಿನಿಧಿಗಳನ್ನು ಭೇಟಿ ಮಾಡಿ 2016 ಮತ್ತು 2017ರ ಆಟಗಾರರ ಹರಾಜಿನ ವಿಧಿವಿದಾನಗಳನ್ನು ಕುರಿತು ವಿವರಣೆ ನೀಡಿದರು.

ಐಪಿಎಲ್ ಸೀಸನ್ 2016 ಮತ್ತು 2017 ಎಂಟು ತಂಡ ಪಂದ್ಯಾವಳಿಯಾಗಿ ಉಳಿಯಲಿದ್ದು,  ನವೆಂಬರ್ 9ರಂದು ಬಿಸಿಸಿಐ ಎಜಿಎಂ  ನಂತರ ಎರಡು ಹೊಸ ತಂಡಗಳಿಗೆ ಬಿಡ್ಡಿಂಗ್ ಆರಂಭವಾಗುತ್ತದೆ ಎಂದು ಮಾಹಿತಿ ನೀಡಲಾಯಿತು. ಫ್ರಾಂಚೈಸಿಗಳು ವಿವೊ ಮೊಬೈಲ್ ಅನ್ನು ಐಪಿಎಲ್ ಹೊಸ ಟೈಟಲ್ ಪ್ರಾಯೋಜಕರನ್ನಾಗಿ  ಸ್ವಾಗತಿಸಿದರು. 
 
 ಇದೊಂದು ಫಲಪ್ರದ ಚರ್ಚೆಯಾಗಿತ್ತು. ಸಿಎಸ್‌ಕೆ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ಅಮಾನತು ನೀಡಿದ್ದಕ್ಕೆ ಸಂಬಂಧಿಸಿದಂತೆ ನಾವು ಕೈಗೊಂಡ ಕ್ರಮಗಳ ಬಗ್ಗೆ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆವು. ಅವರ ಪ್ರತಿಕ್ರಿಯೆಗಳು ನಮಗೆ ಉಪಯುಕ್ತವಾಗಿದ್ದು, ಐಪಿಎಲ್ ಕಾರ್ಯಕಾರಿ ಸಮಿತಿ ಸಲಹೆ ಮಾಡಿದ ಮತ್ತು ಬಿಸಿಸಿಐ ಕಾರ್ಯಕಾರಿ ಸಮಿತಿ ಶಿಫಾರಸು ಮಾಡಿದ ಪರಿಹಾರಗಳನ್ನು ಅವು ಶ್ಲಾಘಿಸಿದವು. 
 

Share this Story:

Follow Webdunia kannada