ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಸಿಕ್ಕ ಬಹುಮಾನ ಹಣವೆಷ್ಟು ಗೊತ್ತಾ?!

ಬುಧವಾರ, 9 ಜನವರಿ 2019 (09:23 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲೇ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭಾರೀ ಮೊತ್ತದ ನಗದು ಬಹುಮಾನ ಘೋಷಿಸಿದೆ.


ಭಾರತೀಯ ಆಟಗಾರರಿಗೆ ಪ್ರತಿಯೊಬ್ಬರಿಗೂ ಸುಮಾರು 25 ಲಕ್ಷ ರೂ.ನಂತೆ ಬಿಸಿಸಿಐ ನಗದು ಹಣ ಬಹುಮಾನ ರೂಪದಲ್ಲಿ ನೀಡಲಿದೆ. ಈ ಬಗ್ಗೆ ಬಿಸಿಸಿಐ ಘೋಷಣೆ ಮಾಡಿದೆ.

ಪಂದ್ಯದಲ್ಲಿ ಆಡಿದ ಆಟಗಾರರಿಗೆ ಪಂದ್ಯದ ಸಂಭಾವನೆಗೆ ಸಮನಾದ ಮೊತ್ತವನ್ನು ಬೋನಸ್ ರೂಪದಲ್ಲಿ ಬಿಸಿಸಿಐ ನೀಡಲಿದೆ. ಅದೇ ರೀತಿ ಆಡದೇ ಕೇವಲ ಸದಸ್ಯರಾಗಿದ್ದ ಆಟಗಾರರಿಗೂ 7.5 ಲಕ್ಷ ರೂ. ಬೋನಸ್ ನೀಡಲಿದೆ. ಇನ್ನು, ಕೋಚ್ ಗಳಿಗೆ 25 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿಗಳಿಗೂ ವೇತನದಷ್ಟೇ ಬೋನಸ್ ಹಣ ನೀಡುತ್ತಿರುವುದಾಗಿ ಬಿಸಿಸಿಐ ಘೋಷಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING