ಟೀಂ ಇಂಡಿಯಾದಲ್ಲಿ ಕ್ಲಿಕ್ ಆಗುತ್ತಿರುವಾಗಲೇ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಅಂಬಟಿ ರಾಯುಡು

ಸೋಮವಾರ, 5 ನವೆಂಬರ್ 2018 (06:42 IST)
ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗಷ್ಟೇ ಕ್ಲಿಕ್ ಆಗುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ.

ಅಂಬಟಿ ಇದುವರೆಗೆ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ ದೇಶೀಯ ಪಂದ್ಯಗಳಲ್ಲಿ 97 ಪಂದ್ಯಗಳನ್ನಾಡಿದ್ದಾರೆ. ಇನ್ನು ಮುಂದೆ ಸುದೀರ್ಘ ಮಾದರಿಯ ಕ್ರಿಕೆಟ್ ನಲ್ಲಿ ಆಡದೇ ಇರಲು ಅವರು ತೀರ್ಮಾನಿಸಿದ್ದಾರೆ.

ಮೊನ್ನೆಯಷ್ಟೇ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಅಂಬಟಿ ರಾಯುಡು, ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದ ತಲೆನೋವು ನಿವಾರಿಸಿದ್ದಾರೆ ಎಂದು ನಾಯಕ ಕೊಹ್ಲಿಯಿಂದ ಹೊಗಳಿಸಿಕೊಂಡಿದ್ದರು. ಅದರ ಬೆನ್ನಲ್ಲೇ 33 ವರ್ಷದ ಕ್ರಿಕೆಟಿಗ ಟೆಸ್ಟ್ ಗೆ ನಿವೃತ್ತಿ ಹೇಳುವ ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಹಾರ್ದಿಕ್ ಪಾಂಡ್ಯ ಮಾಡುತ್ತಿದ್ದ ಕೆಲಸವನ್ನು ಟೀಂ ಇಂಡಿಯಾಗಾಗಿ ಮಾಡಿದ ಸಹೋದರ ಕೃಣಾಲ್