Select Your Language

Notifications

webdunia
webdunia
webdunia
webdunia

ಯುಗಾದಿ...ನಂದನ ಸಂವತ್ಸರ ವರ್ಷ ಭವಿಷ್ಯ ಇಲ್ಲಿದೆ ನೋಡಿ...

ಯುಗಾದಿ...ನಂದನ ಸಂವತ್ಸರ ವರ್ಷ ಭವಿಷ್ಯ ಇಲ್ಲಿದೆ ನೋಡಿ...
PR
ಈ ನಂದನ ಸಂವತ್ಸರವು 23.03.2012 ರಿಂದ 10.04.2013ರವರೆಗೆ ಇರುತ್ತದೆ. ನಂದನ ಸಂವತ್ಸರವು 26ನೇ ಸಂವತ್ಸರವಾಗಿರುತ್ತದೆ. ನಂದನವೆಂದರೆ, ನಂದಗೋಪನ ಪುತ್ರ, ವಿಷ್ಣು, ಒಂದು ಪರ್ವತದ ಹೆಸರು, ಸಂತೋಷಪಡಿಸುವವನು, ಪರಮೇಶ್ವರನನ್ನು ಸೂಚಿಸುತ್ತದೆ. ಇನ್ನೊಂದು ಅರ್ಥದಲ್ಲಿ ಮಂಡೂಕವೆಂದು ಸೂಚಿಸುತ್ತದೆ. ಶಾಲಿವಾಹನ ಶಕ 1934 ಆಗಿರುತ್ತದೆ. ಈ ಸಂವತ್ಸರದಲ್ಲಿ ರಾಜ-ಶುಕ್ರ, ಮಂತ್ರಿ-ಶುಕ್ರ, ಮೇಘಾಧಿಪತಿ ಗುರು, ಸಸ್ಯಾದಿಪತಿ ಚಂದ್ರ, ರಸಾದಿಪತಿಯಾಗಿರುತ್ತಾರೆ.

ಈ ನಂದನ ಸಂವತ್ಸರದಲ್ಲಿ ಧಾನ್ಯಗಳು ಸಮೃದ್ಧವಾಗುವವು. ಮಳೆ ಚೆನ್ನಾಗಿ ಸುರಿದು, ಧನ ಸಂಗ್ರಹವಾಗುವುದು, ಪಂಡಿತರಿಗೆ ಗೌರವ ಸಿಗುವುದು, ಜನರು ಸುಖಿಗಳಾಗುವರು.

ಶುಕ್ರನು ರಾಜನಾಗಿರುವುದರಿಂದ ನೀರು ಸಂಮೃದ್ಧವಾಗಿ ಎಲ್ಲಾ ಜನರು ಸುಖಿಗಳಾಗುವರು ಧಾನ್ಯ ಹಾಗೂ ಫಲಗಳ ವೃದ್ದಿಯಾಗುವುದು ಹಾಲು ಹೆಚ್ಚು ಪ್ರಮಾಣದಲ್ಲಿ ಸಿಗುವುದು ಶುಕ್ರನು ಮಂತ್ರಿಯಾಗಿರುವುದರಿಮದ ಪಶುಗಳು ಸಾಕಷ್ಟು ಹಾಲು ಕೊಡುವವು. ಯುದ್ಧ ಕಲಹಗಳು ಕಡಿಮೆಯಾಗುವುದು. ಧನ-ಧಾನ್ಯಗಳು ಹೆಚ್ಚಾಗುವವು. ಮೇಘಾಧಿಪತಿ ಗುರು ಆಗಿರುವುದರಿಂದ ಮಳೆಯು ಉತ್ತಮ ರೀತಿಯಿಂದ ಸುರಿದು ಧನಧಾನ್ಯಗಳು ಸಮೃದ್ಧವಾಗುವುದು. ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯುವುದು ಮುಂಗಾರು ಮಳೆಗೆ ಚಂದ್ರನು ಅಧಿಪತಿಯಾಗಿರುವುದರಿಂದ ಮಳೆ ಚೆನ್ನಾಗಿ ಬೀಳುವುದು. ಹಾಳು-ಧಾನ್ಯ ಹೆಚ್ಚಾಗಿ ಸಿಗುತ್ತದೆ. ರಸಾಧಿಪತಿ ಕುಜನಾಗಿರುವುದರಿಂದ ಜೇನುತುಪ್ಪ, ಬೆಲ್ಲ, ಎಣ್ಣೆ ಇವುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಮುತ್ತು ಸುವರ್ಣದ ಬೆಲೆಯು ದುಬಾರಿಯಾಗುವುದು. ಹಿಂಗಾರು ಬೆಳೆಗೆ ರವಿಯು ಅಧಿಪತಿಯಾಗಿರುವುದರಿಂದ ಮಳೆಯು ಕೆಲವೊಂದು ಪ್ರದೇಶಗಳಲ್ಲಿ ಕಡಿಮೆಯಾಗಿ ಧನ-ಧಾನ್ಯಗಳು ಕಡಿಮೆ ಪ್ರಮಾಣದಲ್ಲಿ ಬರುವುದು.

ಗ್ರಹಗಳ ಚಲನೆಯ ಆಧಾರದ ಮೇಲೆ ಆಯಾಕಾಲದಲ್ಲಿ ಉಂಟಾಗುವ ಶುಭ ಮತ್ತು ಅಶುಭ ಫಲಗಳ ವಿಶ್ಲೇಷಣೆಯೇ ಗೋಚಾರಫಲ. ಈ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಒಂದೇ ರಾಶಿಯಲ್ಲಿ ದೀರ್ಘಕಾಲ ಸಂಚರಿಸುವ ಶನಿ, ಗುರು ಮತ್ತು ರಾಹು-ಕೇತು ಗ್ರಹಗಳ ಸ್ಥಾನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಜನ್ಮರಾಶಿ (ಚಂದ್ರನಿರುವರಾಶಿ) ಮತ್ತು ಜನ್ಮ ಲಗ್ನ ಎರಡರಿಂದಲೂ ವಿಶ್ಲೇಷಣೆ ಮಾಡಿದಾಗ ನಿಖರವಾದ ಫಲವನ್ನು ಹೇಳಬಹುದು. ಅಲ್ಲದೆ ಹಾಲಿ ನಡೆಯುತ್ತಿರುವ ದಶಾ ಮತ್ತು ಭುಕ್ತಿಯನ್ನೂ ಪರಿಗಣಿಸಿ, ವಿಶ್ಲೇಷಣೆ ಮಾಡಬೇಕಾಗುತ್ತದೆ. ದಶಾ-ಭುಕ್ತಿ ನಡೆಯುತ್ತಿರುವ ಗ್ರಹಗಳು ಗೋಚಾರದಲ್ಲಿ ಶುಭ ರಾಶಿಗಳಲ್ಲಿ ಬಂದಾಗ, ಶುಭಫಲವನ್ನೂ ಹಾಗೂ ಅಶುಭರಾಶಿಯಲ್ಲಿ ಬಂದಾಗ ಅಶುಭ ಫಲವನ್ನು ನೀಡುತ್ತವೆ. ಈ ಫಲಗಳು ಅಷ್ಟಕವರ್ಗ ಬಿಂದುಗಳ ಮೇಲೂ ಅವಲಂಬಿತವಾಗಿರುತ್ತವೆ.

ಎಲ್ಲಾ ಗ್ರಹಗಳಿಗೂ ತಾವಿರುವ ಸ್ಥಾನದಿಂದ ಸಪ್ತಮ ಸ್ಥಾನವನ್ನು ದೃಷ್ಟಿಸುತ್ತವೆ. ಶನಿ, ಗುರು ಮತ್ತು ಕುಜರಿಗೆ ವಿಶೇಷ ದೃಷ್ಟಿಯಿದೆ. ಶನಿಗೆ ತಾನಿರುವ ಸ್ಥಾನದಿಂದ ತೃತೀಯ ಮತ್ತು ದಶಮ ಸ್ಥಾನವನ್ನು ದೃಷ್ಟಿಸುತ್ತದೆ. ಕುಜನಿಗೆ ತಾನಿರುವ ಸ್ಥಾನದಿಂದ ಚತುರ್ಥ ಮತ್ತು ಅಷ್ಟಮ ಸ್ಥಾನವನ್ನು ದೃಷ್ಟಿಸುತ್ತದೆ. ಗುರುವಿಗೆ ತಾನಿರುವ ಸ್ಥಾನದಿಂದ ಪಂಚಮ ಮತ್ತು ನವಮ ಸ್ಥಾನವನ್ನು ದೃಷ್ಟಿಸುತ್ತದೆ.

ಗುರು-ಬುಧರಿಗೆ ಲಗ್ನದಲ್ಲಿ ದಿಗ್ಬಲ, ಚಂದ್ರ-ಶುಕ್ರರಿಗೆ ಚತುರ್ಥದಲ್ಲಿ ದಿಗ್ಬಲ ರವಿ-ಕುಜರಿಗೆ ದಶಮದಲ್ಲಿ ದಿಗ್ಬಲ. ಶನಿಗೆ ಸಪ್ತಮದಲ್ಲಿ ದಿಗ್ಬಲ ನೈಸರ್ಗಿಕವಾಗಿ ಗುರು, ಶುಕ್ರ, ಬುಧ ವೃದ್ದಿಚಂದ್ರ ಶುಭಗ್ರಹಗಳು ರವಿ, ಶನಿ,ಕುಜ, ರಾಹು-ಕೇತುಗಳು ಅಶುಭಗ್ರಹಗಳು. ಆದರೆ ಬುಧನು ಮಾತ್ರ ಶುಭಗ್ರಹರೊಂದಿಗಿದ್ದರೆ ಶುಭನು, ಅಶುಭಗ್ರಹರೊಂದಿಗಿದ್ದರೆ ಅಶುಭನಾಗುತ್ತಾನೆ.

ಮೇಷ:
ಈ ವರ್ಷದ ಮೊದಲ ಭಾಗವು ಅಶಾದಾಯಕವಾಗಿಲ್ಲ ಎರಡನೇ ಭಾಗವು ಉತ್ತಮವಾಗಿದೆ ವಿವಾಹಿತರಿಗೆ ಒಳ್ಳೆಯ ಫಲಗಳಿವೆ ಅರ್ಧಭಾಗದ ನಂತರ ಆರೋಗ್ಯ ಹಾಗೂ ಹಣಕಾಸಿನ ಅಭಿವೃದ್ದಿ ಇದೆ. ಆತ್ಮೀಯರ ಅನೀರೀಕ್ಷಿತ ಸಾವು ನೋವುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಇದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ.

ವೃಷಭ :
ಆತಂಕಗಳು ಕಾಡುತ್ತದೆ. ಆಧ್ಯಾತ್ಮಿಕ ಸಾಧನೆಗೆ ಉತ್ತಮ ಅವಕಾಶಗಳು ದೊರಕುತ್ತದೆ. ಜೀವನ ಶೈಲಿ ಸಂತೋಷ ಕೊಡುತ್ತದೆ. ಅವಿವಾಹಿತರಿಗೆ ಮದುವೆಯ ಸೂಚನೆಗಳಿವೆ. ಆಕಸ್ಮಿಕ ಧನಲಾಭಗಳಿವೆ. ದೂರ ಪ್ರಯಾಣಗಳನ್ನು ಮಾಡುವ ಸಂಭವವಿದೆ. ಗೆಲುವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮಿಥುನ:
ಮೊದಲ ಭಾಗದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಾಧ್ಯತೆ ಇದೆ. ಮದುವೆ ಹಾಗೂ ಸಮಾರಂಭಗಳು ಮನೆಯಲ್ಲಿ ಜರುಗುವ ಸಾಧ್ಯತೆ ಇದೆ. ಕುಟುಂಬ ಜೀವನ ಸುಖಮಯವಾಗಿದೆ. ನಂತರದ ಭಾಗದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಅತಿಯಾದ ಖರ್ಚುಗಳು ಮನಸ್ಸಿನ ನೆಮ್ಮದಿಗೆ ಭಂಗ ತರಬಹುದು. ಮೊದಲ ಭಾಗವು ಸಮಾಜದಲ್ಲಿ ಗೌರವ-ಸಮ್ನಾನಗಳನ್ನು ನೀಡಿದರೆ ಎರಡನೆಯ ಭಾಗವು ಇದರಲ್ಲಿ ಬದಲಾವಣೆಗಳನ್ನು ನೀಡುತ್ತದೆ.

ಕಟಕ:
ಮೊದಲ ಭಾಗದಲ್ಲಿ ಆಸ್ತಿ ವಿಚಾರದಲ್ಲಿ ಸಮಸ್ಯೆಗಳು ತಲೆದೋರಬಹುದು ಸಂಬಂಧಗಳಲ್ಲಿ ಒಡಕು ಮೂಡಬಹುದು ವಯಸ್ಸಾದ ವೃದ್ಧರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಹೊಸ ಉದ್ಯೋಗಗಳಲ್ಲಿ ಲಾಭ ಪ್ರಾಪ್ತಿಯಾಗುತ್ತದೆ. ಪ್ರೇಮ ವಿಚಾರದಲ್ಲಿ ಅಸಫಲತೆ ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ಮಧ್ಯಭಾಗದ ನಂತರ ಉತ್ತಮವಾಗಿದೆ.

ಸಿಂಹ:
ಮೊದಲ ಭಾಗದಲ್ಲಿ ಸಂಭ್ರಮವನ್ನು ಅನುಭವಿಸುವಿರಿ ಸಮಾಜದಲ್ಲಿ ಉತ್ತಮ ಅಭಿಪ್ರಾಯ ಹೊಂದುವಿರಿ ಕುಟುಂಬದಲ್ಲಿ ಸಂತೋಷಗಳು, ತೀರ್ಥಯಾತ್ರೆಗಳನ್ನು ಕೈಗೊಳ್ಳುವಿರಿ ಮನೆಯ ಹಿರಿಯರ ಸಾವು ಸಂಭವಿಸುವ ಸಾಧ್ಯತೆಗಳಿವೆ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ತಾಯಿಯ ಆರೋಗ್ಯದಲ್ಲಿ ಹಿನ್ನೆಡೆಯಾಗುತ್ತದೆ. ಹಣಕಾಸಿನ ಅಭಿವೃದ್ದಿಯಾಗುತ್ತದೆ.

ಕನ್ಯಾ :
ಪ್ರಾರಂಭದಲ್ಲಿ ಜೀವನದ ಬಹಳ ತ್ರಾಸದಾಯಕವಾಗಿ ಕಂಡು ಬರುತ್ತದೆ. ಮಾನಸಿಕ ಹಾಗೂ ದೈಹಿಕ ಶ್ರಮಗಳಾಗುವ ಸಾಧ್ಯತೆಗಳಿವೆ ಅಪಘಾತಗಳಿಂದ ಎಚ್ಚರವಾಗಿರಬೇಕು. ಜ್ಯೋತಿಷ್ಯದಲ್ಲಿ ಆಸಕ್ತಿ ಬರಬಹುದು, ಪಿತ್ರಾರ್ಜಿತ ಆಸ್ತಿ ಬರುವ ಸಂಭವವಿದೆ. ದೂರ ದೇಶದ ಪ್ರಯಾಣ ಸಂಭವವಿದೆ.

ತುಲಾ:
ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿನ ಏರು-ಪೇರುಗಳು ತಾಳ್ಮೆ ಹಾಗೂ ಬುದ್ದಿವಂತಿಕೆಯಿಂದ ಸರಿಯಾಗುತ್ತದೆ ಕೌಟುಂಬಿಕ ಸುಖ ಹಾಗೂ ಮನಸ್ಸಿಗೆ ಉಲ್ಲಾಸವನ್ನು ಮೊದಲ ಅರ್ಧ ಭಾಗದಲ್ಲಿ ಕಾಣಬಹುದು ಪ್ರಯಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಅಪಘಾತಗಳಾಗುವ ಸಂಭವವಿದೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿಗಳು ಕಾಣಬಹುದು.

ವೃಶ್ಚಿಕ :
ಮೊದಲ ಅರ್ಧ ಭಾಗವು ಉತ್ತಮಕರವಾಗಿಲ್ಲದಿದ್ದರು ನಂತರದ ಭಾಗದಲ್ಲಿ ಉತ್ತಮ ಅವಕಾಶಗಳು ಕಂಡುಬಂದು ಸಮಾಜದಲ್ಲಿ ಮಾನ್ಯತೆ ಹೆಚ್ಚುವ ಸಂಭವವಿದೆ. ನಿಧಾರಗಳನ್ನು ತೆಗೆದುಕೊಳ್ಳಲು ಒಳ್ಳೆಯ ಸಮಯವಾಗಿದೆ. ಅವಿವಾಹಿತರಿಗೆ ವಿವಾಹದ ಯೋಗ ಒದಗಿ ಬರುತ್ತದೆ. ಪ್ರಾರಂಭದಲ್ಲಿ ಹಣಕಾಸಿನ ಅಭಿವೃದ್ದಿ ಇಲ್ಲದಿದ್ದರೂ, ನಂತರದಲ್ಲಿ ಉತ್ತಮ ಪ್ರಗತಿ ಕಾಣುತ್ತದೆ.

ಧನಸ್ಸು :
ಧನಸ್ಸು ರಾಶಿಯವರು ಪ್ರಾರಂಭದಿಂದಲೇ ಸಂಭ್ರಮದ ವಾತಾವರಣವನ್ನು ಅನುಭವಿಸುವ ಸಾದ್ಯತೆ ಇದೆ. ಪ್ರೇಮ ಸಂಬಂಧಗಳು ವಿವಾಹಕ್ಕೆ ತಿರುಗುತ್ತದೆ. ಸಮಾಜದಲ್ಲಿ ಮಾನ್ಯತೆ ಪಡೆದಿರುವ ಗಣ್ಯರೊಂದಿಗೆ ಸ್ನೇಹ ಸಂಬಂಧಗಳು ಆಗುತ್ತದೆ. ಆದರೆ ಉತ್ತರಾರ್ಧವು ಸಂಸಾರದಲ್ಲಿ ನಿರಾಶೆಯನ್ನು ಮೂಡಿಸಬಹುದು. ಮನೆಯ ಬದಲಾವಣೆಯಾಗುವ ಸಾಧ್ಯತೆಗಳಿವೆ.

ಮಕರ:
ಮಕ್ಕಳಿಂದ ದೂರವಾಗುವ ಸಂಭವ, ಅಪಘಾತಗಳಿಂದ ಮುನ್ನೆಚ್ಚರಿಕೆ ವಹಿಸಬೇಕು, ಹೊಸ ಸಂಬಂಧಗಳು ಲಾಭದಾಯಕವಾಗಿರುತ್ತದೆ. ಯೋಚನೆಗಳಿಲ್ಲ ಮಾಡಿದ ಹಣಕಾಸಿನ ವಿಷಯಗಳಲ್ಲಿ ನಷ್ಟ ಅನುಭವಿಸುವ ಪ್ರಸಂಗ, ವಾಹನಗಳ ಖರೀದಿ ಸಾಧ್ಯ ಪಾಲುದಾರಿಕೆಯಲ್ಲಿ ಸಮಸ್ಯೆಗಳು ಎದುರಾಗಬಹುದು ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯನ್ನು ಅನುಭವಿಸುವ ಸಂಭವವಿದೆ.

ಕುಂಭ:
ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡ್ಡಿ-ಆತಂಕಗಳು ಎದುರಾಗುವ ಸಂಭವ ಅನಾವಶ್ಯಕ ಭಯ, ಅನುಮಾನಗಳು ಮನಸ್ಸಿನ ನೆಮ್ಮದಿಗೆ ಭಂಗ ತರುವ ಸಾಧ್ಯತೆಯಿದೆ. ಹಿರಿಯರು ಆಕಸ್ಮಿಕ ಸಾವು ಸಂಭವ, ಹಣಕಾಸಿನ ವ್ಯವಹಾರಗಳಲ್ಲಿ ಹಿಡಿತ ತಪ್ಪುವ ಸಾಧ್ಯತೆಗಳಿವೆ. ಅನಾವಶ್ಯಕ ಖರ್ಚುಗಳು ಎದುರಾಗುತ್ತದೆ.

ಮೀನ:
ಪ್ರಾರಂಭದಲ್ಲಿ ಉತ್ತಮ ಅಭಿವೃದ್ದಿ ಕಾಣುತ್ತದೆ. ಆರೋಗ್ಯದಲ್ಲಿ ವೃದ್ದಿಯಾಗುವ ಸಂಭವವಿದೆ. ಹಣಕಾಸಿನ ವ್ಯವಹಾರಗಳು, ಉದ್ಯೋಗಗಳಲ್ಲಿ ಲಾಭಗಳನ್ನು ನೋಡಬಹುದು. ಉತ್ತರಾರ್ಧವು ನೆಂಟರಲ್ಲಿ ಅಪಾರ್ಥಗಳನ್ನು ಸೃಷ್ಠಿಸಿ, ಸಂಬಂಧಗಳಲ್ಲಿ ಬಿರುಕು ಬರುವ ಸಾಧ್ಯತೆಗಳಿವೆ. ಸ್ಥಿರಾಸ್ಥಿಯಲ್ಲಿ ಸಮಸ್ಯೆಗಳು ಒದಗಿ ಬರಬಹುದು. ಕಾದಾಟವನ್ನು (ಕಾನೂನಿನ) ಸಾಧ್ಯವಾದಷ್ಟು ದೂರವಾಗಿಸಿ ಓದಿನಲ್ಲಿ ಸ್ವಲ್ಪ ಮಟ್ಟಿನ ತೊಂದರೆಗಳು ಎದುರಾಗುತ್ತದೆ.

ಆರ್. ಸೀತಾರಾಮಯ್ಯ,
ಜ್ಯೋತಿಷಿ, ಶಿವಮೊಗ್ಗ

Share this Story:

Follow Webdunia kannada