Select Your Language

Notifications

webdunia
webdunia
webdunia
webdunia

ಮೊಹಬ್ಬತೇನ್' ಚಿತ್ರದ ನಟಿ ಕಿಮ್ ಶರ್ಮಾ ಮೇಲೆ ದೂರು ದಾಖಲಾಗಿದ್ದು ಯಾಕೆ?

ಮೊಹಬ್ಬತೇನ್' ಚಿತ್ರದ ನಟಿ ಕಿಮ್ ಶರ್ಮಾ ಮೇಲೆ ದೂರು ದಾಖಲಾಗಿದ್ದು ಯಾಕೆ?
ಮುಂಬೈ , ಗುರುವಾರ, 5 ಜುಲೈ 2018 (06:56 IST)
ಮುಂಬೈ : ‘ಮೊಹಬ್ಬತೇನ್' ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಕಿಮ್ ಶರ್ಮಾ ಅವರು ಮನೆಯ ಕೆಲಸದಾಕೆಗೆ ಸಂಬಳ ನೀಡದೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ನಟಿ ಕಿಮ್ ಅವರ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 31 ವಯಸ್ಸಿನ ಎಸ್ತರ್ ಖೇಸ್ ಎಂಬ ಮಹಿಳೆ ಬಟ್ಟೆ ಒಗೆಯುವಾಗ ತಿಳಿ ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ಪ್ರತ್ಯೇಕಿಸಲು ಮರೆತಿದ್ದರು. ಇದರಿಂದ ಬೇರೊಂದು ಬಟ್ಟೆಗೆ ಬಣ್ಣಗಳು ಹರಡಿದೆ. ಇದರಿಂದ ಕೋಪಗೊಂಡ ನಟಿ ಕಿಮ್ ಅವರು ಆಕೆಯ ಮೇಲೆ ಹಲ್ಲೆ ಮಾಡಿ ಸಂಬಳ ನೀಡದೆ ಮನೆಯಿಂದ ಹೊರಹಾಕಿದ್ದಾರೆ.
ಈ ಕುರಿತು ಕೆಲಸದಾಕೆ ನಟಿಯ ಮೇಲೆ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು, ಐಪಿಸಿ ಸೆಕ್ಷನ್ 323 ಮತ್ತು 504 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ನಟಿ ಕಿಮ್ ಶರ್ಮಾ, ಮನೆಕೆಲಸದವಳ ನಿರ್ಲಕ್ಷ್ಯದಿಂದಾಗಿ ತನ್ನ 70 ಸಾವಿರ ರೂ. ಬೆಲೆಯ ಬಟ್ಟೆಗಳು ಹಾಳಾಗಿವೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ ಪತ್ನಿ ಲತಾ ಮೇಲೆ ಸುಪ್ರೀಂಕೋರ್ಟ್ ಅಸಮಾಧಾನ?