Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಆಪ್ತ ಗೆಳೆಯ ಸಲ್ಮಾನ್ ಖಾನ್ ‘ಸಂಜು’ ಚಿತ್ರ ನೋಡದೇ ಇರುವುದಕ್ಕೆ ಕಾರಣವೇನು ಗೊತ್ತೇ?

ಸಂಜಯ್ ದತ್ ಆಪ್ತ ಗೆಳೆಯ ಸಲ್ಮಾನ್ ಖಾನ್ ‘ಸಂಜು’ ಚಿತ್ರ ನೋಡದೇ ಇರುವುದಕ್ಕೆ ಕಾರಣವೇನು ಗೊತ್ತೇ?
ಮುಂಬೈ , ಶನಿವಾರ, 7 ಜುಲೈ 2018 (07:23 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗಾಗಲೇ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಆದರೆ ಸಂಜಯ್ ದತ್ ಅವರ ಆಪ್ತ ಗೆಳೆಯ, ಬಾಲಿವುಡ್ ಸ್ಟಾರ್ ನಟರೊಬ್ಬರು ಇನ್ನು ಸಂಜು ಸಿನಿಮಾವನ್ನು ವೀಕ್ಷಿಸಿಲ್ಲವಂತೆ.


ಹೌದು. ಸಂಜಯ್ ದತ್ ಅವರ ಆಪ್ತ ಗೆಳೆಯನೆಂದರೆ ಅದು ಸಲ್ಮಾನ್ ಖಾನ್. ಸಂಜಯ್ ದತ್ ಅವರು ಸಿನಿಮಾ ನೋಡುವಂತೆ ನಟ ಸಲ್ಮಾನ್ ಖಾನ್ ಅವರಿಗೆ ಮನವಿ ಮಾಡಿದ್ದರಂತೆ. ಆದರೆ ಸಿನಿಮಾ ರಿಲೀಸ್ ಆಗಿ ಒಂದು ವಾರವಾದರೂ ಸಲ್ಮಾನ್ ಖಾನ್ ಅವರು ಇನ್ನೂ ಸಿನಿಮಾ ವೀಕ್ಷಿಸಿಲ್ಲವಂತೆ.


ಇದಕ್ಕೆ ಕಾರಣ ಸಲ್ಮಾನ್ ಖಾನ್ ಅವರು ದಬಾಂಗ್ ರಿಲೋಡೆಡ್​ ಹೆಸರಿನಲ್ಲಿ ವರ್ಲ್ಡ್​ ಟೂರ್​ನಲ್ಲಿದ್ದು, ಚಿತ್ರ ನೋಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಆದರೆ ಸಂಜು ಸಿನಿಮಾ ಹೀರೋ ರಣ್​ಬೀರ್ ಕಪೂರ್ ಈ ಹಿಂದೆ ಕತ್ರೀನಾ ಕೈಫ್​ ಜೊತೆಗಿದಿದ್ದು, ಆ ಕೋಪಕ್ಕೆ ಸಲ್ಮಾನ್ ಖಾನ್ ಇಂದು ಈ ಸಿನಿಮಾ ನೋಡದೇ ಇರಲು ಅಸಲಿ ಕಾರಣವಾಗಿರಬಹುದು ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸ್ಟಾಗ್ರಾಮ್ ನಲ್ಲಿ ದೇಶದ ಗಣ್ಯ ವ್ಯಕ್ತಿಗಳನ್ನೇ ಹಿಂದಿಕ್ಕಿದ ನಟಿ ಪ್ರಿಯಾಂಕ