Select Your Language

Notifications

webdunia
webdunia
webdunia
webdunia

ಅರ್ಜುನ್ ಕಪೂರ್ ಗೆ ಅಜ್ಜಿ ಹುಡುಕಿದ ಹುಡುಗಿ ಯಾರು ಗೊತ್ತಾ?

ಅರ್ಜುನ್ ಕಪೂರ್ ಗೆ ಅಜ್ಜಿ ಹುಡುಕಿದ ಹುಡುಗಿ ಯಾರು ಗೊತ್ತಾ?
ಮುಂಬೈ , ಶುಕ್ರವಾರ, 21 ಸೆಪ್ಟಂಬರ್ 2018 (07:07 IST)
ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಅಜ್ಜಿ ಅರ್ಜುನ್ ಅವರಿಗೆ ಸರಿ ಹೊಂದುವಂತಹ ಹುಡುಗಿಯೊಬ್ಬಳನ್ನು ಆಯ್ಕೆ ಮಾಡಿದ್ದಾರಂತೆ.


ಹೌದು. ಈ ಹಿಂದೆ ನಟ ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ಅವರ ಅಜ್ಜಿ ನಿರ್ಮಲಾ ಕಪೂರ್ ಶುಭಕೋರುವಾಗ  ‘ಬೇಗ ವಿವಾಹ ಮಾಡಿಕೊ' ಎಂದು ಹೇಳಿದ್ದರು. ಇದೀಗ ಅರ್ಜುನ್ ಕಪೂರ್ ಅಭಿನಯದ 'ನಮಸ್ತೆ ಇಂಗ್ಲೆಂಡ್' ಟ್ರೇಲರ್ ಬಿಡುಗಡೆಯಾದ ಬಳಿಕ ಅರ್ಜುನ್ ಅಜ್ಜಿ, ಅರ್ಜುನ್ ಗೆ ಸರಿಯಾದ ಹುಡುಗಿಯನ್ನು ಹುಡುಕಿದ್ದಾರಂತೆ.


ಅಂದಹಾಗೆ ಅರ್ಜುನ್ ಗೆ ನಿರ್ಮಲಾ ಅವರು ಹುಡುಕಿರುವ ಮದುವೆ ಹೆಣ್ಣು ಬೇರಾರು ಅಲ್ಲ ಅದು ಈ ಚಿತ್ರದಲ್ಲಿ ಅರ್ಜುನ್ ಗೆ ಜೋಡಿಯಾಗಿದ್ದ ನಟಿ ಪರಿಣಿತಿ ಚೋಪ್ರಾ.


ಈ ಕುರಿತಂತೆ ಮಾತನಾಡಿರುವ ಅರ್ಜುನ್ ಕಪೂರ್, ‘ನಮಸ್ತೆ ಇಂಗ್ಲೇಂಡ್ ಟ್ರೇಲರ್ ನೋಡಿದ ಬಳಿಕ, ನನ್ನ ದಾದಿ ಪರಿಣಿತ ಚೋಪ್ರಾರನ್ನು ತೆರೆ ಮೇಲೆ ಬಹುವಾಗಿ ನೆಚ್ಚಿಕೊಂಡಿದ್ದು, ಆಕೆ ನನಗೆ ನಿಜ ಜೀವನದಲ್ಲೂ ಸರಿಯಾದ ಜೋಡಿಯಾಗುತ್ತಾಳೆ ಎಂದೇ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಡಕ್-2 ಚಿತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿರುವ ಮಹೇಶ್ ಭಟ್..