ಅನುಷ್ಕಾ ಅವರನ್ನು ನೋಡಲು ಭಾಗಮತಿ ಸೆಟ್ ಗೆ ಮುಖ ಮುಚ್ಚಿಕೊಂಡು ಬಂದ ನಟ ಯಾರು ಗೊತ್ತಾ…?

ಶುಕ್ರವಾರ, 26 ಜನವರಿ 2018 (08:28 IST)
ಹೈದರಾಬಾದ್ : ಟಾಲಿವುಡ್ ನ ನಟ ಪ್ರಭಾಸ್ ಹಾಗು ಅನುಷ್ಕಾ ಶೆಟ್ಟಿ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ನಂತರ ಅವರಿಬ್ಬರು ತಾವು ಒಳ್ಳೆಯ ಸ್ನೇಹಿತರೆಂದು ಹೇಳಿದ್ದರು. ಆದರೆ ಇತ್ತಿಚೆಗೆ ಪ್ರಭಾಸ್ ಅವರು ಅನುಷ್ಕಾ ಅವರನ್ನು ನೋಡಲು ಮುಖ ಮುಚ್ಚಿಕೊಂಡು ‘ಭಾಗಮತಿ’ ಸೆಟ್ ಗೆ ಬಂದಿರುವ ಪೋಟೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

 
ಅನುಷ್ಕಾ ಅವರು ‘ಭಾಗಮತಿ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರೆ, ಪ್ರಭಾಸ್ ಅವರು ‘ಸಾಹೋ’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದರೂ ಕೂಡ ಅನುಷ್ಕಾ ಅವರನ್ನು ನೋಡಲು ಮುಖಕ್ಕೆ  ಕರ್ಚಿಪ್ ಕಟ್ಟಿಕೊಂಡು ಭಾಗಮತಿ ಸೆಟ್ ಗೆ ಬಂದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING