Select Your Language

Notifications

webdunia
webdunia
webdunia
webdunia

ನನ್ನ ಬಾಯ್ ಫ್ರೆಂಡ್ ಮೇಲೆ ಯಾರಾದರು ಕಣ್ಣು ಹಾಕಿದರೆ ನಾನು ಸುಮ್ಮನೆ ಇರಲ್ಲ

ನನ್ನ ಬಾಯ್ ಫ್ರೆಂಡ್ ಮೇಲೆ ಯಾರಾದರು ಕಣ್ಣು ಹಾಕಿದರೆ ನಾನು ಸುಮ್ಮನೆ ಇರಲ್ಲ
, ಸೋಮವಾರ, 13 ಅಕ್ಟೋಬರ್ 2014 (10:21 IST)
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೀರೋಯಿನ್‌ಗಳು ತಮ್ಮ ಸಹ ನಟರ ಅಥವಾ ಬೇರೆ ಪುರುಷ ಆತ ಮದುವೆ ಆಗಿದ್ದರು ಸಹಿತ ಪ್ರೀತಿಸಿ ಮದುವೆ ಆಗಿ ಬಿಡ್ತಾರೆ. ಇಲ್ಲವೇ ಸ್ನೇಹಿತರಾಗಿ ಇದ್ದು ಬಿಡ್ತಾರೆ. ಕೆಲವು ಬಾರಿ ಆ ಸ್ನೇಹ ಗಡಿ ದಾಟಿ ಇನ್ನೇನೋ ಆಗಿ ಸುದ್ದಿಯಾಗಿ ಸದ್ದು ಮಾಡುತ್ತದೆ. ಅದೇ ರೀತಿ ಆಗಿದೆ ಹಲವು ನಾಯಕಿರ ವಿಷಯದಲ್ಲಿ ಈ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ಪ್ರಿಯಾಂಕ ಮಾತ್ರ ಹಾಗಲ್ಲ. 

ಆಕೆ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಭಿನ್ನ . ತಾನು ಬೇರೆ ತನ್ನ ಸ್ಟೈಲೇ ಬೇರೆ ಎಂದು ಹೇಳುತ್ತಿದ್ದಾರೆ. ಈ ವಿಷಯದ ಬಗ್ಗೆ ಹೇಳುವುದಾದರೆ, ನಾನು ಮಾಡುವ ಸ್ನೇಹ, ನನಗಿರುವ ಸ್ಥಾನ ನನಗೆ ಆರಾಮದಾಯಕವಾಗಿರಬೇಕು. ನನಗೆ ಕಷ್ಟಕರ ಎಂದು ಅನ್ನಿಸಿದ ಕಡೆ ಎಂದಿಗೂ ಇರಲಾರೆ ನಾನು. 
 
ಅದೇ ರೀತಿ ನನಗೆ ಹೊಂದಿಕೆಯಾಗದ ವ್ಯಕ್ತಿಗಳ ಜೊತೆ ಸ್ನೇಹ ಮಾಡುವುದಿಲ್ಲ. ಅದರಲ್ಲೂ ವಿವಾಹಿತ ಪುರುಷರ ಜೊತೆ ನೋ ವೇ. ಅವರ ಪತ್ನಿಯರನ್ನು ಅಭದ್ರತೆಯ ಭಾವಕ್ಕೆ ಗುರಿ ಮಾಡಲು ನಾನು ಎಂದಿಗೂ ಇಷ್ಟ ಪಡುವುದಿಲ್ಲ. ಅಲ್ಲದೆ ಯಾರಿಗಾದರು ಗರ್ಲ್ ಫ್ರೆಂಡ್ ಇದ್ದರೆ ನಾನು ಅವರ ಕಡೆ ಕಣ್ಣೆತ್ತಿ ನೋಡಲ್ಲ. 
 
ಏಕೆಂದರೆ ಬೇರೆಯವರ ವಸ್ತುವಿನ ಮೇಲೆ ಆಸೆ ಪಡುವ ಹೆಣ್ಣು ನಾನಲ್ಲ. ಈ ವಿಷಯದಲ್ಲಿ ಬೇರೆಯವರು ಸಹಿತ ನನ್ನಂತೆ ಇರಬೇಕು ಎಂದು ಬಯಸುತ್ತೇನೆ. ಒಂದು ವೇಳೆ ನನ್ನ ಬಾಯ್ ಫ್ರೆಂಡ್ ಬಗ್ಗೆ ಯಾರಾದರು ಕಣ್ಣು ಹಾಕಿದರೆ ನಾನು ಸುಮ್ಮನೆ ಇರಲ್ಲ ಎಂದು ಹೇಳಿದ್ದಾರೆ  ಈ ಚೆಲುವೆ.. ನಿಮ್ಮ  ಫ್ರೆಂಡ್ ಬಗ್ಗೆ ಹೇಳ್ರಲಾ .. ಎಂದರೆ ಸುಮ್ಮನೆ ಉದಾಹರಣೆಗೆ ಹಾಗೆ ಹೇಳಿದೆ ಎಂದು ಮಾತು ಮರೆಸುತ್ತಾರೆ ! ಛೀ ಕಳ್ಳಿ !! 

Share this Story:

Follow Webdunia kannada