Select Your Language

Notifications

webdunia
webdunia
webdunia
webdunia

ಸಹೋದರ ಅರ್ಬಾಜ್ ಖಾನ್ ಐಪಿಲ್ ಬೆಟ್ಟಿಂಗ್ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

ಸಹೋದರ ಅರ್ಬಾಜ್ ಖಾನ್ ಐಪಿಲ್ ಬೆಟ್ಟಿಂಗ್ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?
ಮುಂಬೈ , ಗುರುವಾರ, 5 ಜುಲೈ 2018 (07:04 IST)
ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರು ಐಪಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಅವರಿಗೆ ಪೊಲೀಸರು ಸಮನ್ಸ್ ಕೂಡ ಜಾರಿ ಮಾಡಿದ್ದರು. ಅಂದು ಈ ಬಗ್ಗೆ ತುಟಿ ಬಿಚ್ಚದ ನಟ ಸಲ್ಮಾನ್ ಖಾನ್ ಅವರು ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಮಾತನಾಡಿದ ಸಲ್ಮಾನ್ ಖಾನ್ ಅವರು, ‘ಸಮನ್ಸ್ ಜಾರಿಯಾದ ಸಂದರ್ಭದಲ್ಲಿ ನಾನು ರೇಸ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿದ್ದೆ. ಅಭಿಮಾನಿಗಳು ಸಿನಿಮಾ ವೀಕ್ಷಣೆಗಾಗಿ  ಸಮಯವನ್ನು ಮೀಸಲಿಡುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಅವರಿಗೆ ಬೇಸರ ಮಾಡಬಾರದು. ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಆದರೂ ಅದನ್ನು ಅಭಿಮಾನಿಗಳ ಮುಂದೆ ತೋರಿಸಬಾರದು. ಕೆಲವು ಜನರು ತಮ್ಮನ್ನು ನ್ಯಾಯಾಧೀಶರೆಂದು ಭಾವಿಸಿ ನಿರ್ಧಾರ ತಿಳಿಸುತ್ತಾರೆ. ಆದರೆ ನಿಜವಾದ ತೀರ್ಪು ಬಂದಾಗ ಎಲ್ಲದಕ್ಕೂ ಉತ್ತರ ದೊರೆಯುತ್ತದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಭಾರತ್’ ಚಿತ್ರಕ್ಕಾಗಿ ನಟಿ ಪ್ರಿಯಾಂಕ ಪಡೆದ ಸಂಭಾವನೆ ಎಷ್ಟು ಗೊತ್ತಾ?