ಪ್ರಿಯಾಂಕ ನಿಶ್ಚಿತಾರ್ಥ ಕುರಿತು ನಿಕ್ ಮಾಜಿ ಪ್ರೇಯಸಿ ಹೇಳಿದ್ದೇನು?

ಶುಕ್ರವಾರ, 7 ಸೆಪ್ಟಂಬರ್ 2018 (16:01 IST)
ಮುಂಬೈ: ಬಾಲಿವುಟ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಸಿಂಗರ್ ನಿಕ್ ಜೋನಸ್ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಆಗಿದೆ. ಈ ಮಧ್ಯೆ ನಿಕ್ ನಿಶ್ಚಿತಾರ್ಥದ ಬಗ್ಗೆ ಮಾಜಿ ಪ್ರೇಯಸಿ ಏನೆಂದಿದ್ದಾರೆ ಗೊತ್ತಾ?


ನಿಕ್ ಮಾಜಿ ಪ್ರೇಯಸಿ ಒಲಿವಿಯಾ, ಪ್ರಿಯಾಂಕ-ನಿಕ್ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಯಾವಾಗ ಬೇಕಾದ್ರೂ ಪ್ರೀತಿಯನ್ನು ಪಡೆಯಬಹುದು. ಅದ್ರಲ್ಲೂ ಸಿನಿಮಾ ಉದ್ಯಮದಲ್ಲಿ ಇದು ಸುಲಭ. ನಾನು ನಿಕ್ ವಿಚಾರದಲ್ಲಿ ಖುಷಿಯಾಗಿದ್ದೇನೆ. ಎಲ್ಲರಿಗೂ ಪ್ರೀತಿ, ಖುಷಿ ಸಿಗಲಿ ಎಂದು ಹಾರೈಸುತ್ತೇನೆ. ನಿಕ್ ನಿಂದ ದೂರವಿದ್ದ ಮಾತ್ರಕ್ಕೆ ಹಾರೈಸಬಾರದು ಎಂದೇನಿಲ್ಲವೆಂದು ಒಲಿವಿಯಾ ಹೇಳಿದ್ದಾರೆ.


ನಿಕ್ ಮತ್ತು ಒಲಿವಿಯಾ 2015ರಲ್ಲಿ ನಿಕ್-ಒಲಿವಿಯಾ ಬೇರೆಯಾಗಿದ್ದರು. ಒಲಿವಿಯಾ ಸದ್ಯ ಅಮೆರಿಕನ್ ಫುಟ್ಬಾಲ್ ಆಟಗಾರ ಡೇನಿಯಲ್ ಜೇಮ್ಸ್ ಅಮೆಂಡೊಲಾ ಜೊತೆ ಡೇಟಿಂಗ್ ನಲ್ಲಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING