Select Your Language

Notifications

webdunia
webdunia
webdunia
webdunia

ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಸುನಿಲ್ ದತ್ ಪಾತ್ರ ಮಾಡಲು ಅಮೀರ್ ಖಾನ್ ಒಲ್ಲೆ ಎಂದಿದ್ಯಾಕೆ?

ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಸುನಿಲ್ ದತ್ ಪಾತ್ರ ಮಾಡಲು ಅಮೀರ್ ಖಾನ್ ಒಲ್ಲೆ ಎಂದಿದ್ಯಾಕೆ?
ಮುಂಬೈ , ಗುರುವಾರ, 24 ಮೇ 2018 (06:37 IST)
ಮುಂಬೈ : ಸಂಜಯ್ ದತ್ ಜೀವನ ಕಥೆ ಆಧಾರಿತ ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ಆಗಾಗ ಕೇಳಿ ಬರುತ್ತಿದ್ದು,  ಇದೀಗ ಈ ಸಿನಿಮಾದಲ್ಲಿ ಸುನಿಲ್ ದತ್ ಪಾತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ನಟಿಸಲು ಒಪ್ಪದೇ ಇರುವುದಕ್ಕೆ ಕಾರಣವೆನೆಂಬುದು ತಿಳಿದುಬಂದಿದೆ.


ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ಪಾತ್ರದಲ್ಲಿ ನಟ ರಣಬೀರ್ ಕಪೂರ್ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಸಂಜಯ್ ದತ್ ತಂದೆ, ಖ್ಯಾತ ಹೀರೋ ಸುನಿಲ್ ದತ್ ಪಾತ್ರಕ್ಕಾಗಿ ಬಾಲಿವುಡ್ ನಟ ಅಮೀರ್ ಖಾನ್‌ ಅವರನ್ನು ಕರೆತರಬೇಕೆಂದು ಚಿತ್ರತಂಡ ಭಾವಿಸಿದ್ದು, ಆದರೆ ಅಮೀರ್ ಖಾನ್ ಅವರು ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲವಂತೆ.


ಇದಕ್ಕೆ ಕಾರಣವೇನೆಂಬುದನ್ನು ಸಂದರ್ಶನವೊಂದರಲ್ಲಿ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ತಿಳಿಸಿದ್ದಾರೆ.,’ ನಾನು ಯಾವುದೇ ಕಥೆ ಸಿದ್ಧಪಡಿಸಿಕೊಂಡರೂ ಮೊದಲು ಅಮೀರ್ ಖಾನ್‌ ಗೆ ಹೇಳುತ್ತೇನೆ. ಅದೇ ರೀತಿ ಈ ಸ್ಕ್ರಿಪ್ಟನ್ನು ಅಮೀರ್‌ ಗೆ ಹೇಳಿದಾಗ ತುಂಬಾ ಚೆನ್ನಾಗಿದೆ ಎಂದು ಅವರು ಮೆಚ್ಚಿಕೊಂಡರು. ಅಷ್ಟೇ ಅಲ್ಲದೆ ಸುನಿಲ್ ದತ್ ಪಾತ್ರ ಮಾಡಲೂ ಒಪ್ಪಿಕೊಂಡರು. ಆದರೆ ಅದೇ ಸಮಯದಲ್ಲಿ ಅವರು ದಂಗಲ್ ಚಿತ್ರದ ಪಾತ್ರಕ್ಕಾಗಿ ಮಧ್ಯಮ ವಯಸ್ಕನಾಗಿ ಕಾಣಿಸಬೇಕಾಗಿದ್ದ ಕಾರಣ, ಮತ್ತೊಮ್ಮೆ ಅದೇ ತರಹ ಪಾತ್ರ ಮಾಡಲೂ ಇಷ್ಟವಿಲ್ಲದೆ ಈ ಚಿತ್ರದಿಂದ ದೂರ ಸರಿದರು’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ನಟಿ ಪ್ರಿಯಾಂಕಾ ಚೋಪ್ರಾ