ಲಂಡನ್ ನಲ್ಲಿ ವಿರುಷ್ಕಾ ದಂಪತಿಗೆ ಸಿಕ್ಕ ಆ ವಿಶೇಷ ಅತಿಥಿ ಯಾರು ಗೊತ್ತಾ?

ಭಾನುವಾರ, 26 ಆಗಸ್ಟ್ 2018 (07:10 IST)
ಲಂಡನ್ : ಲಂಡನ್ ನಲ್ಲಿ ಶಾಪಿಂಗ್ ಮಾಡುತ್ತಿರುವ ವೇಳೆ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸುಂದರ ಹುಡುಗನೊಬ್ಬನನ್ನು ಭೇಟಿ ಮಾಡಿದ್ದಾರಂತೆ.


ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಅನುಷ್ಕಾ ಶಾಪಿಂಗ್ ಅಂತ ಸುತ್ತುತ್ತಿರುತ್ತಾರೆ. ಆ ವೇಳೆ ಲಂಡನ್​ನಲ್ಲಿ ವಿಶೇಷ ಹುಡುಗನೊಬ್ಬನನ್ನು ಭೇಟಿ ಮಾಡಿದ್ದರು.  ಆತನೊಂದಿಗೆ ನಿಂತು ಪೋಸ್​ ಕೊಟ್ಟು ಫೋಟೋವೊಂದನ್ನು ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಹುಡುಗ ಬೇರೆ ಯಾರು ಅಲ್ಲ, ಒಂದು ನಾಯಿ.


ಆ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್​ ಅಕೌಂಟ್​ ನಲ್ಲಿ ಹಂಚಿಕೊಂಡಿರುವ  ಕೊಹ್ಲಿ ನಾವು ಒಬ್ಬ ಸುಂದರ ಹುಡುಗನನ್ನ ಭೇಟಿ ಮಾಡಿದ್ದೆವು.... ಆತ  ನಮ್ಮೊಂದಿಗೆ ತಾಳ್ಮೆಯಿಂದಿದ್ದು, ಫೋಟೋ ಕ್ಲಿಕ್ಕಿಸಲು ಅವಕಾಶ ನೀಡಿದ ಎಂದು ತಲೆ ಬರಹ ಕೊಟ್ಟು ಗಮನ ಸೆಳೆದಿದ್ದಾರೆ. ಈ ಫೋಟೋ ಸಖತ್​ ವೈರಲ್ ಆಗಿದ್ದು ಅದಕ್ಕೆ ಬಾರೀ ಲೈಕ್​ ಕೂಡ ಸಿಕ್ಕಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING