Select Your Language

Notifications

webdunia
webdunia
webdunia
webdunia

ಸದ್ದಿಲ್ಲದೇ ಮದುವೆಯಾಗಲು ಹೊರಟ ತೆಲುಗು ನಟಿ ತ್ರಿಷಾ

ಸದ್ದಿಲ್ಲದೇ ಮದುವೆಯಾಗಲು ಹೊರಟ ತೆಲುಗು ನಟಿ ತ್ರಿಷಾ
ಹೈದರಾಬಾದ್ , ಶನಿವಾರ, 19 ಮೇ 2018 (06:59 IST)
ಹೈದರಾಬಾದ್ : ಇತ್ತೀಚೆಗಷ್ಟೇ ದಕ್ಷಿಣ ಕನ್ನಡದ ಖ್ಯಾತ ನಟಿ ಶ್ರೀಯಾ ಸರಣ್ ಅವರು ರಷ್ಯಾದ ಮೂಲದ ತಮ್ಮ ಗಳೆಯನ ಜೊತೆ ಸದ್ದಿಲ್ಲದೇ ಮದುವೆ ಮಾಡಿಕೊಂಡರು. ಆದರೆ ಅದೇರೀತಿ ಇದೀಗ ತೆಲುಗು ನಟಿ ತ್ರಿಷಾ ಅವರು ಕೂಡ ಸದ್ದಿಲ್ಲದೇ ಮದುವೆಯಾಗಲು ಹೊರಟಿದ್ದಾರೆ.

ಕಳೆದ ನಾಲ್ಕು ವರ್ಷದ ಹಿಂದೆಯೇ ತ್ರಷಾ ಅವರು ಬ್ಯುಸಿನಸ್‍ಮ್ಯಾನ್ ವರುಣ್ ಜೊತೆ ಅದ್ಧೂರಿ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಅವರ ನಡುವಿನ ಸಂಬಂಧ ಮುರಿದುಹೋಯಿತ್ತು. ಬಳಿಕ ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿತ್ತು.


ಆದರೆ ಇದೀಗ ಅವರು ಮುಂಬೈ ಮೂಲದ ಬುಸಿನಸ್‍ಮ್ಯಾನ್ ಅನ್ನು ಮದುವೆಯಾಗಿ  ನಂತರ ಇಬ್ಬರೂ ವಿದೇಶದಲ್ಲಿ ಸೆಟಲ್ ಆಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಕೆಲವೇ ತಿಂಗಳಲ್ಲಿ ತ್ರಿಷಾ ಮದುವೆಯಾಗಲಿದ್ದು, ವಿದೇಶದಲ್ಲಿ ಆಭರಣ, ಬಟ್ಟೆ ಖರೀದಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ನಿಂದ ನೊಂದ ತಮ್ಮ ಅಭಿಮಾನಿಗೆ ಕಿಚ್ಚನ ಸಲಹೆ ಏನು ಗೊತ್ತಾ?