Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಈ ನಟಿಯರ ಜೊತೆ ಸೇರಿ ತುಳು ಚಿತ್ರ ಮಾಡುತ್ತಾರಂತೆ ಸುನೀಲ್ ಶೆಟ್ಟಿ

ಬಾಲಿವುಡ್ ನ ಈ ನಟಿಯರ ಜೊತೆ ಸೇರಿ ತುಳು ಚಿತ್ರ ಮಾಡುತ್ತಾರಂತೆ ಸುನೀಲ್ ಶೆಟ್ಟಿ
ಮುಂಬೈ , ಗುರುವಾರ, 20 ಸೆಪ್ಟಂಬರ್ 2018 (07:10 IST)
ಮುಂಬೈ : ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್  ಚಿತ್ರಗಳಲ್ಲಿ ಮಿಂಚಿದ ಐಶ್ವರ್ಯಾ ರೈ, ಸುನೀಲ್ ಶೆಟ್ಟಿ ಹಾಗೂ  ಶಿಲ್ಪಾ ಶೆಟ್ಟಿ ಮೂವರು ಸೇರಿ ಇದೀಗ ತಮ್ಮ ತುಳು ಭಾಷೆಯಲ್ಲಿ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದಾರಂತೆ.


ಹೌದು. ಮಂಗಳೂರಿನವರಾದ ಐಶ್ವರ್ಯಾ ರೈ, ಸುನೀಲ್ ಶಿಟ್ಟಿ ಹಾಗೂ  ಶಿಲ್ಪಾ ಶೆಟ್ಟಿ ತುಳುನಾಡ ಸಂಸ್ಕೃತಿ, ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು. ಇತ್ತೀಚೆಗೆ ನಟ ಸುನೀಲ್ ಶೆಟ್ಟಿ ಉಡುಪಿಯಲ್ಲಿ ನಡೆದ ಬಂಟರ ಕಾರ್ಯಕ್ರಮಕ್ಕೂ ಹಾಜರಾಗಿದ್ದರು.

 
ಆ ವೇಳೆ ಅವರು ಬಾಲಿವುಡ್ ಸ್ನೇಹಿತರು ಮತ್ತು ತುಳುನಾಡಿನವರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ ಮುಂತಾದವರು ಜೊತೆಗೂಡಿ ತುಳು ಚಿತ್ರವೊಂದನ್ನು ಮಾಡುವ ಆಲೋಚನೆ ಇರೋದಾಗಿಯೂ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೈಸ್ತ ಸಂನ್ಯಾಸಿಯರ ಬಗ್ಗೆ ನಿಮ್ಮ ನಿಲುವೇನು? ಎಂದು ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ಕಿಡಿಕಾರಿದ ಮೋಹನ್‌ ಲಾಲ್