Select Your Language

Notifications

webdunia
webdunia
webdunia
webdunia

ಕಾಸ್ಟಿಂಗ್ ಕೌಚ್ ಎದುರಿಸಿದ ನಟಿಯರ ಹೆಸರು ಬಯಲು ಮಾಡಿದ ಶ್ರೀರೆಡ್ಡಿ!

ಕಾಸ್ಟಿಂಗ್ ಕೌಚ್ ಎದುರಿಸಿದ ನಟಿಯರ ಹೆಸರು ಬಯಲು ಮಾಡಿದ ಶ್ರೀರೆಡ್ಡಿ!
ಹೈದರಾಬಾದ್ , ಬುಧವಾರ, 18 ಜುಲೈ 2018 (07:09 IST)
ಹೈದರಾಬಾದ್ : ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಹಾಗೂ ನಿರ್ದೇಶಕರ ಮೇಲೆ ಆರೋಪ ಮಾಡುತ್ತಿದ್ದ  ತೆಲುಗು ನಟಿ ಶ್ರೀರೆಡ್ಡಿ ಅವರು ಇದೀಗ ಕಾಸ್ಟಿಂಗ್ ಕೌಚ್ ಎದುರಿಸಿದ ತೆಲುಗು ಚಿತ್ರರಂಗದ ಖ್ಯಾತ ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ.


ಹೌದು. ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ  ಎಸಗಿದವರ ಹೆಸರನ್ನು ಬಹಿರಂಗ ಪಡಿಸುವುದರ ಮೂಲಕ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ನಟಿ ಶ್ರೀರೆಡ್ಡಿ ಅವರು ಇದೀಗ ತಮ್ಮ ಫೇಸ್ ಬುಕ್ ನಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ತೆಲುಗು ಚಿತ್ರರಂಗದ ಖ್ಯಾತ ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ.


'ಕೆಲವರು ನನ್ನ ಲಿಸ್ಟ್ ತುಂಬಾ ದೊಡ್ಡದಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ನನ್ನ ಲಿಸ್ಟ್ ತುಂಬಾ ಚಿಕ್ಕದಿದೆ. ಒಂದು ವೇಳೆ ತ್ರಿ..., ನಯ..ತಾ..., ಕಾ..... ಹಾಗೂ ಸ...ತಾ, ತಾವು ಎದುರಿಸಿದ ಕಾಸ್ಟಿಂಗ್ ಕೌಚ್​ ಬಗ್ಗೆ ಮಾತನಾಡಿದ್ರೆ, ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುವ ಸುದ್ದಿಯನ್ನು ಕೇಳಬೇಕಾಗುತ್ತೆ' ಎಂದು ಶ್ರೀರೆಡ್ಡಿ ಬರೆದುಕೊಂಡಿದ್ದಾರೆ.


ಇನ್ನು ಶ್ರೀರೆಡ್ಡಿ ಕೇವಲ ಆ ನಟಿಯರ ಹೆಸರುಗಳ ಮೊದಲ ಹಾಗೂ ಕೊನೆಯ ಅಕ್ಷರಗಳನ್ನು ಮಾತ್ರ ಹೇಳಿದ್ದು, ಟಾಲಿವುಡ್​ ಮಂದಿ ಹೇಳುವಂತೆ ಈ ಹೆಸರುಗಳು ತ್ರಿಷಾ, ನಯನತಾರಾ, ಕಾಜಲ್ ಅಗರ್​ವಾಲ್ ಹಾಗೂ ಸಮಂತಾ ಅಕ್ಕಿನೇನಿ ಅವರದ್ದಾಗಿವೆ ಎನ್ನಲಾಗುತ್ತಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ನಟಿ ರಾಧಿಕಾ ಪಂಡಿತ್ ಮಡಿಲಿಗೆ ‘ಮರಿ ರಾಕಿಂಗ್ ಸ್ಟಾರ್’ ಬರ್ತಾರಂತೆ