Select Your Language

Notifications

webdunia
webdunia
webdunia
webdunia

ದೀಪಿಕಾ -ರಣವೀರ್ ಮದುವೆಯ ಬಗ್ಗೆ ವಿವಾದಾತ್ಮಕ ಫೋಸ್ಟ್ ಮಾಡಿದ ಸಚಿವೆ ಸ್ಮೃತಿ ಇರಾನಿ

ದೀಪಿಕಾ -ರಣವೀರ್ ಮದುವೆಯ ಬಗ್ಗೆ ವಿವಾದಾತ್ಮಕ ಫೋಸ್ಟ್ ಮಾಡಿದ ಸಚಿವೆ ಸ್ಮೃತಿ ಇರಾನಿ
ಮುಂಬೈ , ಶುಕ್ರವಾರ, 16 ನವೆಂಬರ್ 2018 (10:00 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ  ದೀಪಿಕಾ ರಣ್ವೀರ್ ಮದುವೆಯ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿವಾದಾತ್ಮಕ ಫೋಸ್ಟ್ ವೊಂದನ್ನು ಮಾಡಿದ್ದಾರೆ.


ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಹಾಗೂ ರಣ್ವೀರ್ ತಮ್ಮ ಮದುವೆ ಫೋಟೋ ಲೀಕ್ ಆಗಬಾರದೆಂದು ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ತರಕೂಡದು ಎಂಬ ಕಂಡೀಷನ್ ಹಾಕಿದ್ದಾರೆ. ಅವರ ಅಭಿಮಾನಿಗಳು ಅವರ ಮದುವೆ ಫೋಟೊಗಳನ್ನು ನೋಡಬೇಕೆಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಚಿವೆ ಸ್ಮೃತಿ ಇರಾನಿ ಮಾತ್ರ ಈ ಜೋಡಿಯ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ವೊಂದನ್ನು ಮಾಡಿದ್ದಾರೆ.


ಹೌದು. ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಲವು ದಿನಗಳಿಂದ ಕಾತುರದಿಂದ ಕಾಯುತ್ತಾ ಕುಳಿತಂತಿದ್ದ  ಅಸ್ಥಿಪಂಜರದ ಚಿತ್ರವೊಂದನ್ನು ಹಾಕಿ ಡಿಪ್ಪಿ - ರಣ್ವೀರ್ ಮದುವೆ ಫೋಟೋ ನೋಡಲು ವರ್ಷಗಳೇ ಕಾಯಬೇಕು ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಈ ಪೋಸ್ಟ್ ಇದೀಗ ಬಾರೀ ಚರ್ಚೆಗೆ ಕಾರಣವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ - ರಣವೀರ್ ಸಿಂಗ್