Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್‌ಗೂ ಒಂದು ಆಪ್ ಬಂತಪ್ಪಾ

ನಟ ಸಲ್ಮಾನ್ ಖಾನ್‌ಗೂ ಒಂದು ಆಪ್ ಬಂತಪ್ಪಾ
Mumbai , ಮಂಗಳವಾರ, 20 ಡಿಸೆಂಬರ್ 2016 (10:44 IST)
ಬಾಲಿವುಡ್ ಬಡೆಮಿಯಾ ಸಲ್ಮಾನ್ ಖಾನ್ ಇದೇ ಡಿಸೆಂಬರ್ 27ಕ್ಕೆ ಅರ್ಧ ಸೆಂಚುರಿ ಮುಗಿಸಿ 51ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಸ್ವಂತ ಆಪ್ ಬಿಡುಗಡೆ ಮಾಡುತ್ತಿರುವುದಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಲ್ಲು ಇಂದಿನ ಜಮಾನಾ ಯುವಕರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.
 
"ಡಿಸೆಂಬರ್ 27ರಂದು... ಇದು ನನ್ನ ಆಪ್ ಬರ್ತ್‌ಡೇ. ಕೇವಲ ನಿಮಗಾಗಿ" ಎಂದು ಸಲ್ಮಾನ್ ಖಾನ್ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಆಪ್ ಮೂಲಕ ಅಭಿಮಾನಿಗಳಿಗೆ ವೈಯಕ್ತಿಕವಾಗಿ ಇನ್ನಷ್ಟು ಹತ್ತಿರವಾಗಬೇಕೆಂದು ಸಲ್ಮಾನ್ ಭಾವಿಸುತ್ತಿದ್ದಾರೆ.
 
ಸಲ್ಲುಬಾಯ್ ಸದ್ಯಕ್ಕೆ ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ’ಟ್ಯೂಬ್‌ಲೈಟ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಚೀನಾ ನಟಿ ಚೂಚೂ ಹೀರೋಯಿನ್. ಮುಂದಿನ ವರ್ಷದ ಈದ್ ಮಿಲಾದ್ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲು ಸಲ್ಲು ಸಿದ್ದವಾಗುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರದ್ಧಾ ಕಪೂರ್ ಮೇಲಿನ ಗಾಸಿಪ್ ನಂಬಬೇಡಿ!