Select Your Language

Notifications

webdunia
webdunia
webdunia
webdunia

'ಸುಲ್ತಾನ್' ಹಿರೋ ಸಲ್ಮಾನ್ ಖಾನ್ ನ್ಯೂ ಹೇರ್ ಸ್ಟೈಲ್..

'ಸುಲ್ತಾನ್' ಹಿರೋ ಸಲ್ಮಾನ್ ಖಾನ್ ನ್ಯೂ ಹೇರ್ ಸ್ಟೈಲ್..
ದೆಹಲಿ , ಸೋಮವಾರ, 13 ಜೂನ್ 2016 (17:10 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ನ್ಯೂ ಹೇರ್ ಸ್ಟೈಲಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಆನ್ ಸ್ಕ್ರೀನ್‌ನಲ್ಲಿ ಬೇರೆಯಾಗಿ ಕಾಣುತ್ತಿದ್ದ ನಟ ಸಲ್ಲು, ಆಫ್ ಸ್ಕ್ರೀನ್ ಮೇಲೆ ಸಲ್ಮಾನ್ ಹಲವು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಲ್ಲು ಇದೀಗ ಲೆಟೆಸ್ಟ್ ಆಗಿ ನ್ಯೂ ಹೇರ್ ಸ್ಟೈಲ್ ಮೂಲಕ ಹೊಸದಾದಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕ್ರೇಜ್ ಮೂಡಿಸಿದ್ದಾರೆ.

ಶೂಟರ್ ಬಗ್ಸ್ ಮೂಲಕ ತಮ್ಮ ನ್ಯೂ ಹೇರ್ ಸ್ಟೈಲ್ ಫೊಟೋವನ್ನು ಸಲ್ಮಾನ್ ಶೇರ್ ಮಾಡಿದ್ದಾರೆ. ಶಾರ್ಟ್ ಆಗಿರೋ ಹೇರ್ ಸ್ಟೈಲ್ ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ.

ಸುಲ್ತಾನ್ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ.


ಚಿತ್ರದ ಹಾಡುಗಳು ಕೂಡ ಸಖತ್ ಆಗಿದೆ. 'ಬೇಬಿ ಕೋ ಬಾಸ್ ಪಸಂದ್ ಹೇ' ಹಾಡುಗಳು ,ಅಭಿಮಾನಿಗಳಲ್ಲಿ ಚಿತ್ರದ ಸಾಂಗ್ ಕುರಿತು ನಿರೀಕ್ಷೆ ಹೆಚ್ಚಿದೆ.
 
ಚಿತ್ರದ ಸಾಂಗ್ ನೋಡಿದ್ರೆ ಸಲ್ಮಾನ್ ಹಾಗೂ ಅನುಷ್ಕಾ ಶರ್ಮಾರ ಡ್ಯಾನ್ಸಿಂಗ್ ಸ್ಕಿಲ್ಸ್ ಅದ್ಭುತವಾಗಿ ಮೂಡಿ ಬಂದಿದೆ... ಬೇಬಿ ಕೋ ಬಾಸ್ ಪಸಂದ್ ಹೇ ಚಿತ್ರದ ಸಾಂಗ್‌ನ್ನು ವಿಶಾಲ್ ದದಲಾನಿ ಹಾಡಿದ್ದಾರೆ.ಅಲ್ಲದೇ ಸಾಂಗ್ ಕಂಪೋಸ್ ಮಾಡಿದ್ದಾರೆ ವಿಶಾಲ್ ದಾದಲಾನಿ ಹಾಗೂ ಶೇಖರ್ ರವಿಜಾನಿ.. ಸುಲ್ತಾನ್ ಚಿತ್ರದ ಈ ಹಾಡು ಕೇಳುಗರನ್ನು ಮೋಡಿ ಮಾಡುವುದಂತು ಸುಳ್ಳಲ್ಲ.
 
ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ. ಈದ್ ಹಬ್ಬದಂದು ಚಿತ್ರ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

'ಮೇರಿ ಪ್ಯಾರಿ ಬಿಂದು' ಸೆಟ್‌ನಲ್ಲಿ ಪರಿಣಿತಿ ಏನ್ ಮಾಡಿದ್ರು ಗೊತ್ತಾ?