Select Your Language

Notifications

webdunia
webdunia
webdunia
webdunia

ರೂ.600 ಕೋಟಿ ಮೋಹನ್ ಲಾಲ್ ಸಿನಿಮಾ

ರೂ.600 ಕೋಟಿ ಮೋಹನ್ ಲಾಲ್ ಸಿನಿಮಾ
Thiruvananthapuram , ಬುಧವಾರ, 11 ಜನವರಿ 2017 (11:25 IST)
ಮಲಯಾಳಂ ಎವರ್‌ಗ್ರೀನ್ ನಟ ಮೋಹನ್ ಲಾಲ್ ತನ್ನ ವೃತ್ತಿಬದುಕಿನಲ್ಲೇ ಅತ್ಯಂತ ದುಬಾರಿ ಬಜೆಟ್ ಸಿನಿಮಾದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ. ಎಂ.ಟಿ. ವಾಸುದೇವನ್ ನಾಯರ್ ರಚಿಸಿರುವ ರಾಂಡಮ್ ಓಜ್‌ಹಮ್ (ಎರಡನೇ ತಿರುವು) ಎಂಬ ಕಾದಂಬರಿ ಅಧಾರವಾಗಿ ತೆರೆಗೆ ಬರಲಿರುವ ಚಿತ್ರದಲ್ಲಿ ಮೋಹನ್ ಲಾಲ್ ಮುಖ್ಯಪಾತ್ರ ಮಾಡಲಿದ್ದಾರೆ ಎನ್ನುತ್ತಿವೆ ಮೋಲಿವುಡ್ ಮೂಲಗಳು.
 
ಈ ಸಿನಿಮಾಗಾಗಿ ಸುಮಾರು ರೂ.600 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಕಾದಂಬರಿ ಮಹಾಭಾರತದ ಭೀಮನ ಕೋನದಲ್ಲಿ ಮೂಡಿಬಂದಿದ್ದು, ಚಿತ್ರೀಕರಣ 2017ರ ಕೊನೆಗೆ ಆರಂಭವಾಗಲಿದೆಯಂತೆ.  ಮೋಹನ್ ಲಾಲ್ ಸಿನಿಮಾ ಎಂದರೆ ನಿರೀಕ್ಷೆಗಳು ಬೇರೆ ತರಹ ಇರುತ್ತವೆ. 
 
ಇತ್ತೀಚೆಗೆ ತೆರೆಕಂಡ ’ಪುಲಿಮುರುಗನ್’ ಚಿತ್ರ ಬಾಕ್ಸ್ ಆಫೀಸಲ್ಲಿ ಗರ್ಜಿಸಿದೆ. ಸುಮಾರು ರೂ.25 ಕೋಟಿ ಬಜೆಟ್‍ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸಾಫೀಸಲ್ಲಿ ರೂ.100 ಕೋಟಿ ಕಲೆಕ್ಷನ್ ಮಾಡಿ ಮೋಹನ್ ಲಾಲ್‍ರನ್ನು ಮಲಯಾಳಂನ ನಂಬರ್ ಒನ್ ನಟನನ್ನಾಗಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಿತೆರೆಯ ಮೇಲೆ ಬರಲಿದೆ ಉದ್ದಮ್ ಸಿಂಗ್ ಕಥೆ