ಎಲ್ಲರೂ ನೋಡ್ತಿದ್ದ ಹಾಗೇ ಪತ್ನಿ ದೀಪಿಕಾ ಪಡುಕೋಣೆಗೆ ಇದೇನು ಮಾಡಿಬಿಟ್ಟರು ರಣವೀರ್ ಸಿಂಗ್?!

ಶುಕ್ರವಾರ, 1 ಫೆಬ್ರವರಿ 2019 (09:31 IST)
ಮುಂಬೈ: ಇಟೆಲಿಯಲ್ಲಿ ಇತ್ತೀಚೆಗಷ್ಟೇ ವಿವಾಹವಾದ ಬಾಲಿವುಡ್ ನ ಮೋಸ್ಟ್ ಹಾಟ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಎಲ್ಲೇ ಹೋದರೂ ಕ್ಯಾಮರಾ ಕಣ್ಣುಗಳು ಸುಮ್ಮನೇ ಬಿಡಲ್ಲ.


ಇದೀಗ ಈ ಜೋಡಿ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಹೊರಬರುತ್ತಿರಬೇಕಾದರೆ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಆ ಸಂದರ್ಭದಲ್ಲಿ ರಣವೀರ್ ತಮ್ಮ ಪತ್ನಿ ಜತೆ ನಡೆದುಕೊಂಡ ರೀತಿ ವೈರಲ್ ಆಗಿದೆ.

ರೆಸ್ಟೋರೆಂಟ್ ನಿಂದ ಹೊರಬರುತ್ತಿರುವಾಗ ತಮ್ಮ ಫೋಟೋ ತೆಗೆಯಲು ಕ್ಯಾಮರಾ ಮೆನ್ ಗಳ ಸಾಲೇ ನಿಂತಿರುವುದನ್ನು ನೋಡಿದ ರಣವೀರ್ ಅರೆಕ್ಷಣ ತಡೆಯುವಂತೆ ಹೇಳಿ ಸೀದಾ ಪತ್ನಿಯ ತೊಡೆ ಮೇಲಿದ್ದ ಕಲೆಯನ್ನು ತಮ್ಮ ಟೀ ಶರ್ಟ್ ನಿಂದ ಒರೆಸಿದ್ದಾರೆ. ಬಳಿಕ ದೀಪಿಕಾರನ್ನು ಬಿಗಿಯಾಗಿ ಅಪ್ಪಿಕೊಂಡು ಎಲ್ಲರೆದುರೇ ಮುದ್ದಿಸಿದ್ದಾರೆ. ರಣವೀರ್ ಮತ್ತು ದೀಪಿಕಾರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING