Select Your Language

Notifications

webdunia
webdunia
webdunia
webdunia

ತಮ್ಮ ಕರಿಯರ್'ನ ಮೊದಲ ಪ್ರಶಸ್ತಿ ಪಡೆದುಕೊಂಡ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್

ತಮ್ಮ ಕರಿಯರ್'ನ ಮೊದಲ ಪ್ರಶಸ್ತಿ ಪಡೆದುಕೊಂಡ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್
ಮುಂಬೈ , ಭಾನುವಾರ, 29 ಏಪ್ರಿಲ್ 2018 (06:18 IST)
ಮುಂಬೈ : ಕಣ್ಸನ್ನೆ ಮೂಲಕ ಪ್ರಖ್ಯಾತಿ ಪಡೆದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ತಮ್ಮ ಕರಿಯರ್'ನ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಒರು ಅಡರ್ ಲವ್ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಈ ಸಿನಿಮಾದಲ್ಲಿ  ಹುಬ್ಬು ಹಾರಿಸಿ ಹಾಡೊಂದರಿಂದಲೇ ಪಡ್ಡೆಹುಡುಗರ ನಿದ್ದೆಕೆಡಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದರು. ಆದರೆ ತಮ್ಮ ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೆ ಪ್ರಿಯಾ ಅವರಿಗೆ ‘ವೈರಲ್ ಪರ್ಸನಾಲಿಟಿ ಆಫ್ ದಿ ಇಯರ್’ ಎಂಬ ಪ್ರಶಸ್ತಿ ಒಲಿದು ಬಂದಿದೆ.
ಈ ಬಗ್ಗೆ ಸ್ವತಃ ಪ್ರಿಯಾ ಅವರೇ ತಮ್ಮ ಇನ್'ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ತಮಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ತಮ್ಮ ಔಟ್ಲುಕ್'ಗಾಗಿ ಸಂದ ಈ ಪ್ರಶಸ್ತಿಯ ಸಂಪೂರ್ಣ ಕ್ರೆಡಿಟ್ ಒರು ಅಡರ್ ಲವ್ ಚಿತ್ರ ತಂಡಕ್ಕೆ ಸಲ್ಲಬೇಕು ಎಂದು ಪ್ರಿಯಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ದೇಶಕ್ಕೆ ಭಾರತದ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರಾ ನಟ ಅಮೀರ್‌ ಖಾನ್‌!