Select Your Language

Notifications

webdunia
webdunia
webdunia
webdunia

ಪ್ರಭುದೇವ ಅವರ ನೆಚ್ಚಿನ ಹಾಡು ಯಾವುದೆಂದರೆ..

ಪ್ರಭುದೇವ ಅವರ ನೆಚ್ಚಿನ ಹಾಡು ಯಾವುದೆಂದರೆ..
ಹೈದ್ರಾಬಾದ್ , ಸೋಮವಾರ, 4 ಜುಲೈ 2016 (10:01 IST)
ದಕ್ಷಿಣ ಭಾರತೀಯ ನಟ ಪ್ರಭುದೇವ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಭುದೇವ್ ಸಾಕಷ್ಟು ಬಾಲಿವುಡ್ ಚಿತ್ರಗಳಲ್ಲಿ ಕೋರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದವರು. ದಕ್ಷಿಣ ಭಾರತದ ಕೋರಿಯೋಗ್ರಾಫರ್ ಹಾಗೂ ನಟ, ನಿರ್ದೇಶಕ ಪ್ರಭುದೇವ ಮುಂಬರುವ ಕನ್ನಡ ಚಿತ್ರ 'ಬದ್ಮಾಶ್' ಚಿತ್ರದ ಹಾಡಿನ ಬಗ್ಗೆ ಫೋಕಸ್ ವಹಿಸಿದ್ದಾರೆ. 


ದಕ್ಷಿಣ ಭಾರತದ ಕೋರಿಯೋಗ್ರಾಫರ್ ಹಾಗೂ ನಟ, ನಿರ್ದೇಶಕ ಪ್ರಭುದೇವ ಮುಂಬರುವ ಕನ್ನಡ ಚಿತ್ರ 'ಬದ್ಮಾಶ್' ಚಿತ್ರದ ಹಾಡಿನ ಬಗ್ಗೆ ಫೋಕಸ್ ವಹಿಸಿದ್ದಾರೆ. ಪ್ರಭುದೇವ ಈ ಚಿತ್ರದ ಮಾಯಾವಿ ಕನಸೇ ಹಾಡನ್ನು ಆಲಿಸಿದ್ದಾರೆ. ಈ ಹಾಡು ಪ್ರಭುದೇವ ಅವರಿಗೆ ತುಂಬಾನೇ ಇಷ್ಟವಾಗಿದೆಯಂತೆ. 
 
ಅಂದಹಾಗೆ ಈ ಹಾಡನ್ನು ಜುಧಾ ಸಂಧೆ ಕಪೋಸ್ ಮಾಡಿದ್ದು, ಈ ಬಗ್ಗೆ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಪ್ರಭುದೇವ ಮ್ಯೂಸಿಕ್ ಕಂಪೋಸರ್ ಹಾಗೂ ನಿರ್ದೇಶಕ ಹಾಗೂ ಗಾಯಕರ  ಜತೆಗೆ ತಮ್ಮ ಕೆಲಸದ ಅನುಭವ ಹೇಗಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.

ಕಂಪೋಸರ್, ನಿರ್ದೇಶಕರು ಹಾಗೂ ಗಾಯಕರು ಮೂವರು ಮೆಲೋಡಿಯಸ್ ಟ್ರ್ಯಾಕ್ ತರಲು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಾಡು ಥೈಲ್ಯಾಂಡ್‌ನಲ್ಲಿ ಶೂಟ್ ಮಾಡಲಾಗಿದೆ. ಈ ಚಿತ್ರದಲ್ಲಿ ಧನಂಜಯ್ ಹಾಗೂ ಸಂಚಿತಾ ಶೆಟ್ಟಿ ಚಿತ್ರದ ಲೀಡ್ ರೋಲ್‌ನಲ್ಲಿದ್ದು, ನಿರ್ದೇಶನವನ್ನು ಆಕಾಶ ಶ್ರೀವಾತ್ಸವ ಮಾಡಿದ್ದಾರೆ.

ಇನ್ನೂ ದಕ್ಷಿಣ ಭಾರತೀಯ ನಟ ಪ್ರಭುದೇವ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಭುದೇವ್ ಸಾಕಷ್ಟು ಬಾಲಿವುಡ್ ಚಿತ್ರಗಳಲ್ಲಿ ಕೋರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮದುವೆಯಾಗಿದ್ದಾರಂತೆ ನಟ ದುನಿಯಾ ವಿಜಯ್