Select Your Language

Notifications

webdunia
webdunia
webdunia
webdunia

ವಿವಾದಕ್ಕೆ ಕಾರಣವಾಗಿದೆ ವಿಶಾಲ್ ಅಭಿನಯದ ‘ಅಯೋಗ್ಯ’ ಚಿತ್ರದ ಫೋಸ್ಟರ್

ವಿವಾದಕ್ಕೆ ಕಾರಣವಾಗಿದೆ ವಿಶಾಲ್ ಅಭಿನಯದ ‘ಅಯೋಗ್ಯ’ ಚಿತ್ರದ ಫೋಸ್ಟರ್
ಚೆನ್ನೈ , ಶುಕ್ರವಾರ, 23 ನವೆಂಬರ್ 2018 (07:10 IST)
ಚೆನ್ನೈ : ತಮಿಳು ನಟ ವಿಶಾಲ್ ನಟಿಸುತ್ತಿರುವ ‘ಅಯೋಗ್ಯ’ ಚಿತ್ರದ ಫೋಸ್ಟರ್ ಇದೀಗ ವಿವಾದವೊಂದಕ್ಕೆ ಕಾರಣವಾಗಿದೆ.


ಹೌದು. ನಟ ವಿಶಾಲ್ ನಟಿಸುತ್ತಿರುವ ‘ಅಯೋಗ್ಯ’ ಚಿತ್ರದ ಫೋಸ್ಟರ್ ಬುಧವಾರ ಬಿಡುಗಡೆಯಾಗಿತ್ತು. ಇದರಲ್ಲಿ  ನಟ ವಿಶಾಲ್​ ಪೊಲೀಸ್​ ಜೀಪ್​ ಮೇಲೆ ಕುಳಿತು ಸ್ಟೈಲಿಶ್​ ಲುಕ್​ನಲ್ಲಿ ಕಂಗೊಳಿಸಿದ್ದಾರೆ. ಆದರೆ, ಅವರ ಕೈಯಲ್ಲಿರುವ ಬಿಯರ್ ಬಾಟಲಿ ಈಗ ವಿವಾದಕ್ಕೆ ಕಾರಣವಾಗಿದೆ. ಕೆಲವರು ವಿಶಾಲ್​ನ ಈ ಲುಕ್​​ ಮೆಚ್ಚಿಕೊಂಡಿದ್ದರೆ, ಇನ್ನ ಕೆಲವರು ಏನ್ ಸಾರ್ ಬಿಯರ್ ಪ್ರಮೋಟ್ ಮಾಡುತ್ತಿದ್ದೀರಾ ಎಂದು ಕಾಲೆಳೆದಿದ್ದಾರೆ.


ಇನ್ನು 'ಅಯೋಗ್ಯ' ಚಿತ್ರ ಟಾಲಿವುಡ್​ನ ಬ್ಲಾಕ್ ಬಸ್ಟರ್ ಟೆಂಪರ್ ಚಿತ್ರದ ರಿಮೇಕ್​. ವಿಶಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ  ಈ ಚಿತ್ರವನ್ನು ವೆಂಕಟ್​ ಮೋಹನ್​ ಮೊದಲಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಪ್ರಕರಣ; ಬಾಲಿವುಡ್ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಎಫ್ ಐಆರ್ ದಾಖಲು