Select Your Language

Notifications

webdunia
webdunia
webdunia
webdunia

ಕತ್ರಿನ ಕಾಸ್ಟುಂ ಬೆಲೆ ಬರೋಬ್ಬರಿ ಒಂದು ಕೋಟಿ

ಕತ್ರಿನ ಕಾಸ್ಟುಂ ಬೆಲೆ ಬರೋಬ್ಬರಿ ಒಂದು ಕೋಟಿ
ಮುಂಬೈ , ಸೋಮವಾರ, 7 ಜುಲೈ 2014 (10:07 IST)
ಒಂದು ಹೀರೋಯಿನ್ ಗಾಗಿ ನಿರ್ಮಾಪರೊಬ್ಬರು ಕಾಸ್ಟೂಮ್ ಗಾಗಿ ಒಂದು ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಇದು ನಂಬುವ ವಿಷಯವೇ ಎನ್ನುವ ಪ್ರಶ್ನೆ ಕಾಡುವುದು ಸಹಜ. 
 
ಹೃತಿಕ್ ರೋಶನ್ ಮತ್ತು ಕತ್ರಿನ ಕೈಫ್ ಒಟ್ಟಾಗಿ ಭಾರಿ ಬಜೆಟ್ ಚಿತ್ರ ಒಂದರಲ್ಲಿ ನಟಿಸುತ್ತಾ ಇದ್ದಾರೆ. ಬ್ಯಾಂಗ್ ಬ್ಯಾಂಗ್ ಅನ್ನುವ ಚಿತ್ರದಲ್ಲಿ ಈ ಜೋಡಿ ಒಂದಾಗಿದೆ. 
 
ಇದರ  ಮೊದಲ ಲುಕ್ ಗೆ ಒಳ್ಳೆಯ ರೆಸ್ಪಾಸ್ ಬಂದಿದೆ. ಆದರೆ ಈ ಚಿತ್ರಕ್ಕೆ ಸಂಬಂಧಪಟ್ಟಂತೆ, ಒಂದು ಆಶ್ಚರ್ಯಕರ ಸಂಗತಿ ಹೊರ ಬಂದಿದೆ. ಈ ಸಿನಿಮಾದಲ್ಲಿ ಕತ್ರಿನ ಕಾಸ್ಟುಂ ಗೆಂದು ಖರ್ಚು ಮಾಡಿದ ಮೊತ್ತ ಈಗಾಗಲೇ ಒಂದು ಕೋಟಿ ರೂಪಾಯಿಯನ್ನು ಸಮೀಪಿಸಿದೆಯಂತೆ. 
 
..........ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರದಲ್ಲಿ ಕತ್ರಿನಾ ಫ್ಯಾಶನ್ ಮಾಡೆಲ್ ಆಗಿ ನಟಿಸುತ್ತಾ ಇದ್ದಾಳಂತೆ. ಅದಕ್ಕೆ ಪೂರಕವಾದ   ವಸ್ತ್ರಗಳನ್ನು ಇಲ್ಲಿ ಬಳಕೆ ಮಾಡಲಾಗಿದೆ. ಈ ಚಿತ್ರದ ಖರ್ಚು ತಿಳಿದಿರುವುದಕ್ಕಿಂತ ಹೆಚ್ಚಾದ ಕಾರಣ ತೀವ್ರವಾದ  ಅಸಹನೆ ಹೊಂದಿದ್ದಾರಂತೆ ನಿರ್ಮಾಪಕರು.  
 
ಇತ್ತೀಚೆಗೆ ಆಕೆಗೆ ಸಿದ್ಧವಾದ ಉಡುಪು ಒಂದು ಕೋಟಿ ರೂಪಾಯಿ. ಈಗ  ಇನ್ನು ನಾಲ್ಕು ಲಕ್ಷ ರೂಪಾಯಿ ಬೇಕೆಂದು ಡಿಸೈನರ್ ಕೇಳಿ ನಿರ್ಮಾಪಕರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಆಗ ಕತ್ರಿನ ಡಿಸೈನರ್ ನ್ನು ಕರೆದು ತನ್ನ ಹಣ ನೀಡಿದಳಂತೆ.ಇಷ್ಟೆಲ್ಲಾ ಖರ್ಚಾದ  ಆ ಉಡುಗೆಯಲ್ಲಿ ಆಕೆ ಹೇಗೆ ಕಾಣುತ್ತಾಲೋ ಎನುವ ಕುತೂಹಲ ಎಲ್ಲರನ್ನು ಕಾಡಿದೆ!

Share this Story:

Follow Webdunia kannada