ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಹೊಡೀತು ಬಂಪರ್ ಲಕ್?!

ಗುರುವಾರ, 30 ನವೆಂಬರ್ 2017 (09:04 IST)
ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ಬಾಲಿವುಡ್ ನಲ್ಲಿ ಅದೃಷ್ಟದ ಬಾಗಿಲು ತೆರೆದಿದೆಯಾ? ಹಾಗೊಂದು ಸುದ್ದಿ ಓಡಾಡುತ್ತಿದೆ.
 

ಮೂಲಗಳ ಪ್ರಕಾರ ಮಾನುಷಿ ಸಲ್ಮಾನ್ ಖಾನ್ ಗೆ ನಾಯಕಿಯಾಗುವ ಅವಕಾಶ ಪಡೆದಿದ್ದಾರಂತೆ. ಮಾನುಷಿ ಸೌಂದರ್ಯಕ್ಕೆ ಮನಸೋತಿರುವ ಸಲ್ಮಾನ್ ಆಕೆಯನ್ನು ತಮ್ಮ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಮಾಡಿ ಬಾಲಿವುಡ್ ಗೆ ಲಾಂಚ್ ಮಾಡಲು ಹೊರಟಿದ್ದಾರಂತೆ.

ಈಗಾಗಲೇ ಹಲವಾರು ಬಾಲಿವುಡ್ ನಿರ್ಮಾಪಕರು ಮಾನುಷಿ ಮನೆ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಮಾನುಷಿಯನ್ನು ಸಲ್ಮಾನ್ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕತ್ರಿನಾ ಕೈಫ್, ಸ್ನೇಹಾ ಉಲ್ಲಾಳ್ ರಂತಹ ನಟಿಯರನ್ನು ಬಾಲಿವುಡ್ ಗೆ ಪರಿಚಯಿಸಿದ್ದ ಸಲ್ಮಾನ್ ಇದೀಗ ಮಾನುಷಿಗೂ ಛಾನ್ಸ್ ಕೊಡುತ್ತಾರಾ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING