10 ಇಯರ್ಸ್ ಚಾಲೆಂಜ್ ಸ್ವೀಕರಿಸಿದ ಮಲೈಕಾ ಅರೋರಾಗೆ ಟ್ವಿಟರಿಗರು ಈ ಪರಿ ಬೆಂಡೆತ್ತಿದ್ದು ಯಾಕೆ ಗೊತ್ತಾ?!

ಭಾನುವಾರ, 20 ಜನವರಿ 2019 (09:29 IST)
ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ 10 ಇಯರ್ಸ್ ಚಾಲೆಂಜ್ ನಲ್ಲಿ ಇದೀಗ ಸೆಲೆಬ್ರಿಟಿಗಳು ಪೈಪೋಟಿಗೆ ಬಿದ್ದು ತಮ್ಮ 10 ವರ್ಷದ ಹಳೆಯ ಮತ್ತು ಈಗಿನ ಫೋಟೋಗಳನ್ನು ಪ್ರಕಟಿಸುತ್ತಿದ್ದಾರೆ.


ಈ ನಡುವೆ ಈ ಚಾಲೆಂಜ್ ಸ್ವೀಕರಿಸಿದ ಬಾಲಿವುಡ್ ನಟಿ ಮಲೈಕಾ ಅರೋರಾಗೆ ಟ್ವಿಟರಿಗರು ಸರಿಯಾಗಿಯೇ ಬೆಂಡೆತ್ತಿದ್ದಾರೆ. ಇದಕ್ಕೆ ಕಾರಣ ಮಲೈಕಾ ಮಾಡಿದ ಎಡವಟ್ಟು.

10 ಇಯರ್ಸ್ ಚಾಲೆಂಜ್ ಎಂದು ಮಲೈಕಾ 10 ವರ್ಷದ ಹಿಂದಿನ ಫೋಟೋ ಪ್ರಕಟಿಸುವ ಬದಲು 20 ವರ್ಷ ಹಳೆಯ ಫೋಟೋ ಪ್ರಕಟಿಸಿದ್ದು ಟ್ವಿಟರಿಗರ ಟ್ರೋಲ್ ಗೆ ಕಾರಣವಾಗಿದೆ. ನಿಮಗೆ ಲೆಕ್ಕ ಸರಿಯಾಗಿ ಬರಲ್ವಾ? 10 ವರ್ಷ ಎಂದರೆ 20 ವರ್ಷ ಹಳೆಯ ಫೋಟೋ ಪ್ರಕಟಿಸಿದ್ದೀರಲ್ವಾ? ಇದು 20 ಇಯರ್ಸ್ ಚಾಲೆಂಜ್ ಆಯ್ತು ಎಂದಿದ್ದಾರೆ.

ಮಲೈಕಾ 1998 ರ ಕಾಲದಲ್ಲಿ ರೈಲಿನ ಮೇಲೆ ನಿಂತು ಚಯ್ಯಾ ಚಯ್ಯಾ ಹಾಡಿಗೆ ಕುಣಿದ ಫೋಟೋ ಪ್ರಕಟಿಸಿದ ಕಾರಣ ಟ್ವಿಟರಿಗರು ಬೇಗನೇ ಈ ಎಡವಟ್ಟನ್ನು ಗುರುತಿಸಿ ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING