ಆತ್ಮಹತ್ಯೆ ಮಾಡಿಕೊಂಡ ಕಾಲಿವುಡ್ ನ ಖ್ಯಾತ ನಟಿ ರಿಯಾಮಿಕ

ಶನಿವಾರ, 1 ಡಿಸೆಂಬರ್ 2018 (07:29 IST)
ಚೆನ್ನೈ : ಕಾಲಿವುಡ್ ನ ಖ್ಯಾತ ನಟಿ ರಿಯಾಮಿಕ(26) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನಟಿ ರಿಯಾಮಕ ತಮಿಳುನಾಡಿನ ವಾಲಾಸರವಕ್ಕಂನಲ್ಲಿರುವ ತನ್ನ ಸಹೋದರ ಪ್ರಕಾಶ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನ. 28ರಂದು ತನ್ನ ಸಹೋದರನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.


ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ನಟಿಯ  ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಿಯಾಮಿಕ ಅವರಿಗೆ ಕಾಲಿವುಡ್‍ನಲ್ಲಿ ಸಾಕಷ್ಟು ಸಿನಿಮಾಗಳಿತ್ತು. ಆದರೆ ಅವರು ತುಂಬಾ ಒತ್ತಡದಲ್ಲಿದ್ದರು. ಕೆಲಸದ ಒತ್ತಡದಿಂದ ರಿಯಾಮಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಈಕೆ ಕುಂಡ್ರತೈಲ್ ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿ-ಯಿನ್ ಅಟ್ಟಮ್ ಆರಂಬಂ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣ ದಾಖಲು