ಕೇದಾರ್​ನಾಥ್ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಬುಧವಾರ, 7 ನವೆಂಬರ್ 2018 (12:50 IST)
ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಾರಾ ಅಲಿ ಖಾನ್ ನಟನೆಯ ಕೇದಾರ್​ನಾಥ್ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ.


ಹೌದು. ಕೇದಾರ್​ನಾಥ್​ ಚಿತ್ರದ ಟೀಸರ್​ ಇತ್ತೀಚೆಗೆ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಕೂಡ ಪಡೆದಿದೆ. ಆದರೆ ಇದೀಗ ಈ ಚಿತ್ರ ಉತ್ತರಾಖಂಡ್​ನ ಕೇದಾರನಾಥದ ಪುರೋಹಿತ ವರ್ಗದವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಚಿತ್ರವನ್ನು ನಿಷೇಧಿಸುವಂತೆ ಕೇಳಿಕೊಂಡಿದ್ದಾರೆ.


ಈ ಚಿತ್ರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ದೇವಸ್ಥಾನದ ಆವರಣದಲ್ಲಿ ಚಿತ್ರಿಸಲಾದ ಡ್ಯಾನ್ಸ್​ ದೃಶ್ಯಾವಳಿಗಳು ಆಶ್ಲೀಲವಾಗಿವೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಚಿತ್ರ ಲವ್ ಜಿಹಾದ್ ವಿಷಯವನ್ನು ಪ್ರೋತ್ಸಾಹಿಸುತ್ತದೆ ಎಂಬ ಆರೋಪದ ಹಿನ್ನಲೆ ಈ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಶಾರುಖ್ ಖಾನ್ ವಿರುದ್ಧ ದೂರು ದಾಖಲು