ಈಗಷ್ಟೇ ಮದುವೆಯಾಗಿದ್ದೀಯಾ.. ಫ್ಲರ್ಟ್ ಮಾಡಲು ಬಂದ ಕಪಿಲ್ ಶರ್ಮಾಗೆ ಸಾನಿಯಾ ಮಿರ್ಜಾ ತಿರುಗೇಟು

ಗುರುವಾರ, 31 ಜನವರಿ 2019 (10:40 IST)
ಮುಂಬೈ: ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋ ಕಾರ್ಯಕ್ರಮಕ್ಕೆ ಆಗಮಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫ್ಲರ್ಟ್ ಮಾಡಲು ಬಂದ ಕಪಿಲ್ ಶರ್ಮಾಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.


ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಗುವಾದ ಬಳಿಕ ಇದೇ ಮೊದಲ ಬಾರಿಗೆ ಟಿವಿ ಶೋ ಒಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾನಿಯಾ ಜತೆಗೆ ಸಹೋದರಿ ಆನಮ್ ಮಿರ್ಜಾ ಕೂಡಾ ಪಾಲ್ಗೊಂಡಿದ್ದರು.

ಈ ವೇಳೆ ನಿರೂಪಕ ಕಪಿಲ್ ಶರ್ಮಾ ‘ನಾನು ನಿಮಗಾಗಿಯೇ ಟೆನಿಸ್ ನೋಡುವುದು’ ಎಂದು ಫ್ಲರ್ಟ್ ಮಾಡಿದ್ದಾರೆ. ಇದಕ್ಕೆ ಸಾನಿಯಾ ‘ಏಟು ತಿನ್ತೀಯಾ.. ಈಗಷ್ಟೇ ಮದುವೆಯಾಗಿದ್ದೀಯಾ.’ ಎಂದು ತಿರುಗೇಟು ಕೊಟ್ಟಿದ್ದಾರೆ. ಈ ಶೋ ಇದೇ ಶನಿವಾರ ಭಾನುವಾರ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING