Select Your Language

Notifications

webdunia
webdunia
webdunia
webdunia

ಕಂಗನಾ- ಹೃತಿಕ್ ವಾರ್ ಬಗ್ಗೆ ಸೋನಮ್ ಕಪೂರ್ ಹೇಳಿದ್ದೇನು?

ಕಂಗನಾ- ಹೃತಿಕ್ ವಾರ್ ಬಗ್ಗೆ ಸೋನಮ್ ಕಪೂರ್ ಹೇಳಿದ್ದೇನು?
ಮುಂಬೈ , ಮಂಗಳವಾರ, 10 ಮೇ 2016 (11:47 IST)
ಕಂಗನಾ ಹಾಗೂ ಹೃತಿಕ್ ರೋಷನ್ ನಡುವಿನ ಜಟಾಪಟಿ ದೇಶದಾದ್ಯಂತ ಸುದ್ದಿಯಾಗಿದ್ದು ಗೊತ್ತೇ ಇದೆ. ಇನ್ನೇನು ವಿವಾದ ಮುಗಿಯಿತು ಅನ್ನೋವಾ ಮತ್ತೆ ಇನ್ನೊಂದು ಕಾರಣಕ್ಕೆ ವಿವಾದ ಹುಟ್ಟಿಕೊಳ್ಳುತ್ತಿತ್ತು.ಹೀಗಿರುವಾಗಲೇ ಇದೀಗ ನಟಿ ಸೋನಮ್ ಕಪೂರ್ ಅವರು ಈ ಜಟಾಪಟಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

 
ಮೊನ್ನೆಯಷ್ಟೇ ಪ್ರಿಯಾಂಕ ಛೋಪ್ರಾ ಅವರ ಕಂಗನಾ ಹಾಗೂ ಹೃತಿಕ್ ನಡುವಿನ ಜಟಾಪಟಿಯನ್ನು ಸಂಭಾಳಿಸಿದ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಅಂತಾ ಹೇಳಿದ್ದರು. ಇದೀಗ ಸೋನಮ್ ಕಪೂರ್ ಅವರು ಕೂಡ ಇದೇ ಮಾತನ್ನು ಹೇಳಿದ್ದಾರೆ.
 
ಘಟನೆಯ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದಾಗ ಅದಕ್ಕೆ ಉತ್ತರಿಸಿದ ಸೋನಮ್ ನಿಜಕ್ಕೂ ನನಗೆ ಕಂಗನಾ ಅವರು ಗ್ರೇಟ್ ಅಂತಾ ಅನಿಸಿತ್ತೆ ಅಂತಾ ಹೇಳಿದ್ದಾರೆ.ಅಲ್ಲದೇ ಹೃತಿಕ್ ಅವರನ್ನು ಅವರು ಹಾಡಿ ಹೊಗಳಿದ್ದಾರೆ. ನನಗೆ ಇದರಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಅನ್ನೋದು ಗೊತ್ತಿಲ್ಲ.
 
ನಾನು ಹೃತಿಕ್ ಅವರನ್ನು ನೋಡುತ್ತಲೇ ಬೆಳೆದವಳು. ಅವರು ಯಾವ ರೀತಿಯ ವ್ಯಕ್ತಿ ಅನ್ನೋದು ನನಗೆ ಗೊತ್ತು. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ.ಅವರು ತುಂಬಾ ಭಾವನಾತ್ಮಕ ವ್ಯಕ್ತಿ ಅಂದಿದ್ದಾರೆ.
ಹೃತಿಕ್ ನನ್ನ ಗೆಳಯ ಆಗಿದ್ರೂ ಕೂಡ ನಾನು ಒಬ್ಬ ಮಹಿಳೆಯಾಗಿ ಕಂಗನಾ ಅವರ ಪರವಾಗಿಯೇ ನಿಲ್ಲುತ್ತೇನೆ. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಯೂರ್ಕ್ ನಲ್ಲಿ ಯು ಟರ್ನ್ ಸಿನಿಮಾ ತಂಡ