ನಟಿ ಕಂಗನಾ ರನಾವತ್ ರ ಆ ‘ಭಾಗ’ಕ್ಕೇ ಕೈ ಹಾಕಿದ್ದ ಭೂಪ!

ಬುಧವಾರ, 23 ಜನವರಿ 2019 (09:36 IST)
ಮುಂಬೈ: ಯಾವುದೇ ವಿಚಾರಗಳಿದ್ದರೂ ನೇರ ನುಡಿಯಿಂದಲೇ ಕೇಂದ್ರ ಬಿಂದುವಾಗುವ ಬಾಲಿವುಡ್ ನಟಿ ಕಂಗನಾ ರನಾವತ್ ಮತ್ತೆ ತಮ್ಮ ಮೇಲೆ ನಡೆದ ಲೈಂಗಿಕ ಶೋಷಣೆಯೊಂದರ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.


ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಂಗನಾ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಯುವಕನೊಬ್ಬ ತಮ್ಮ ಪೃಷ್ಠದ ಮೇಲೆ ಕೈ ಹಾಕಿದ ಘಟನೆಯೊಂದನ್ನು ವಿವರಿಸಿದ್ದಾರೆ.

‘ನಾನು ಗುಂಪಿನ ಮಧ್ಯೆ ಇದ್ದೆ. ಆ ವ್ಯಕ್ತಿ ನೇರವಾಗಿ ನನ್ನ ಪೃಷ್ಠದ ಮೇಲೆ ಚಿವುಟಿದ. ತಕ್ಷಣ ತಿರುಗಿ ನೋಡಿದಾಗ ಆತ ಅಲ್ಲಿಯೇ ಇದ್ದ. ಅವನ ಮುಖದಲ್ಲಿ ಸ್ವಲ್ಪವೂ ಭಯ, ಸಿಕ್ಕಿಬಿದ್ದ ಭಾವನೆ ಕಾಣಲಿಲಲ್ಲ. ಇದು ಲೈಂಗಿಕ ಶೋಷಣೆಯೂ ಅಲ್ಲ, ಬದಲಾಗಿ ಆತ ‘ನಾನು ಮಾಡಬಾರದ್ದನ್ನೇ ಮಾಡಿದ್ದೇನೆ’ ಎಂಬ ಭಾವವಿತ್ತು. ಮತ್ತು ‘ಈಗ ನೀನೇನು ಮಾಡುವೆ’ ಎಂದು ಕೇಳುವಂತಿತ್ತು ಆತನ ಮುಖಭಾವ’ ಎಂದು ಕಂಗನಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹುಡುಗಿಯರು ಇಂತಹ ಅನುಭವಗಳಾದಾಗ ಸುಮ್ಮನೇ ಕೂರಬಾರದು. ನಮಗೆ ಸರಿ ಎನಿಸಿದ್ದನ್ನು ಯಾರಾದರೂ ಮಾಡಿದರೆ ಅದನ್ನು ನೇರವಾಗಿ ಪ್ರತಿಭಟಿಸಲು ಹುಡುಗಿಯರಿಗೆ ಹೇಳಿಕೊಡಬೇಕು ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING