Select Your Language

Notifications

webdunia
webdunia
webdunia
webdunia

ಹಾಲಿವುಡ್ ಚಿತ್ರದಲ್ಲಿ ರವಿ ಮಾಮನ ಜೂಹಿ ಚಾವ್ಲ ನಟನೆ

ಹಾಲಿವುಡ್ ಚಿತ್ರದಲ್ಲಿ ರವಿ ಮಾಮನ  ಜೂಹಿ ಚಾವ್ಲ  ನಟನೆ
, ಶನಿವಾರ, 9 ಆಗಸ್ಟ್ 2014 (10:29 IST)
ದಿ ಹಂಡ್ರೆಡ್  ಫೂಟ್ ಜರ್ನಿ ಚಿತ್ರದಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ಮಾತ್ರ ಕಾಣಿಸಿದ್ದೇನೆ ಎನ್ನುವ ಸಂಗತಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ ಹಿರಿಯ ನಟಿ ಜೂಹಿ ಚಾವ್ಲ. ಈ ಚಿತ್ರದಲ್ಲಿ ಓಂ ಪುರಿ ಮತ್ತು ಹೆಲನ್ ಮಿರ್ರನ್ ಮುಖ್ಯಪಾತ್ರಧಾರಿ ಆಗಿದ್ದಾರೆ. ತಾನು ಕೇವಲ ಎರಡು ಸನ್ನಿವೇಶಗಳಲ್ಲಿ ಮಾತ್ರ ಕಾಣಸಿಗುತ್ತೇನೆ ಎನ್ನುವ ಸಂಗತಿಯನ್ನು ಆಕೆ ಹೇಳಿದ್ದಾರೆ. 


 
ಈ ಸಿನಿಮಾದ ಆರಂಭದಲ್ಲಿ ಅದು ಕೇವಲ ಎರಡು ಮೂರು ನಿಮಿಷಗಳಲ್ಲಿ ಮಾತ್ರ ನಾನು ಕಾಣಿಸುತ್ತೇನೆ. ಈ ರೀತಿ ಕಾಣಿಸಿಕೊಳ್ಳುವುದು ಹೆಮ್ಮೆಯ ಸಂಗತಿ ಅಲ್ಲ ಎಂದು ಹೇಳಿದ್ದಾರೆ. ಜೂಹಿ ಈಗ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಹರಡಿರುವ ಸುದ್ದಿಯನ್ನು ಖಂಡಿಸಿ ಈ  ಸಂಗತಿ ಹೇಳಿದ್ದಾರೆ.

ಆದರೆ ಕಾಣಿಸಿಕೊಳ್ಳುವುದು ಸ್ವಲ್ಪ ನಿಮಿಷಗಳಾದರೂ ಸಹಿತ ನಿರ್ದೇಶಕ ಆ ಪಾತ್ರವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ ಎನ್ನುವ ಮೆಚ್ಚುಗೆಯ ಮಾತುಗಳು ಜೂಹಿಯಿಂದ ಹೊರ ಬಂದಿದೆ. ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಈ ಮೊದಲು ತನಗೆ ತಿಳಿದಿರಲಿಲ್ಲ, ಆಕಸ್ಮಿಕವಾಗಿ ಅವಕಾಶ ಸಿಕ್ಕಿತು ಎನ್ನುವ ಸಂಗತಿ ಹೇಳಿದ್ದಾರೆ ಮೇಡಂ ಜೂಹಿ !

webdunia
ನಾಸುರುದ್ದೀನ್ ಷಾ ಮತ್ತು ಅನುಪಮ್ ಖೇರ್ ಅವರ ನಟನೆಯ ಎ ವೆಡ್ನಸ್ ಡೇ ಸಿನಿಮಾ ತನಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಅಂತಹ ಚಿತ್ರದಲ್ಲಿ ನಟಿಸುವ ಅವಕಾಶ ತನಗೆ ಎಂದು ಬರುತ್ತದೆಯೋ ಎನ್ನುವ ಕನಸಿದೆ ಎಂದು ಹೇಳಿದ್ದಾರೆ. ಈಗ ತಾವು ನಟಿಸಿರುವ ಚಿತ್ರದಲ್ಲಿ ಓಂ ಪುರಿ ಅವರ ಪಾತ್ರ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಹೇಳಿದ್ದಾರೆ ಜೂಹಿ.ಒಟ್ಟಾರೆ ಜೂಹಿ ಹಾಲಿವುಡ್ ಗೆ ಹಾರುತ್ತಿಲ್ಲ, ಅದೇ ಈಗಿರುವ ಸುದ್ದಿ.. ಅದನ್ನು ಆಕೆ ವಿವರಿಸಿದಂತೆ ನಾವು ಅದರ ನೇರಾನೇರ ವಾಗಿ ಬರೆದಿದ್ದೇವೆ. 

Share this Story:

Follow Webdunia kannada