Select Your Language

Notifications

webdunia
webdunia
webdunia
webdunia

ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಗಾಯಮಾಡಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಗಾಯಮಾಡಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಮುಂಬೈ , ಮಂಗಳವಾರ, 12 ಜೂನ್ 2018 (12:54 IST)
ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ರೇಸ್-3 ಚಿತ್ರದ ಶೂಟಿಂಗ್ ವೇಳೆ ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ವಾಸಿಯಾಗದಂತ ಗಾಯವನ್ನು ಮಾಡಿಕೊಂಡಿದ್ದಾರಂತೆ.


ಕಳೆದ ಮಾರ್ಚ್ ತಿಂಗಳಲ್ಲಿ ರೇಸ್-3 ಸಿನಿಮಾದ ಚಿತ್ರೀಕರಣ ಅಬುಧಾಬಿಯಲ್ಲಿ ನಡೆಯುತ್ತಿದ್ದ ವೇಳೆ  ಸ್ಟಂಟ್ ಮಾಡುವಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕಣ್ಣಿಗೆ ಪೆಟ್ಟು ಬಿದ್ದಿತ್ತಂತೆ. ಅಂದು ಅದು ಸಣ್ಣ ಗಾಯ ಅಂತ ಅಂದುಕೊಂಡ ನಟಿಗೆ ಆಮೇಲೆ ಅದು ಶಾಶ್ವತ ಗಾಯವೆಂಬುದು ತಿಳಿದಿದೆ.


ಈ ಬಗ್ಗೆ  ನಟಿ ಜಾಕ್ವೆಲಿನ್ ಅವರು ತಮ್ಮ ಇನ್ಸ್​ ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ‘ಇದು ನನ್ನ ಕಣ್ಣಿಗೆ ಆಗಿರುವ ಶಾಶ್ವತ ಗಾಯ. ನನ್ನ ಐರಿಸ್ ಇನ್ಮುಂದೆ ಗೋಲಾಕಾರವಾಗಿ ಇರುವುದಿಲ್ಲ. ಆದ್ರೆ, ನನ್ನ ದೃಷ್ಟಿಗೆ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಸಿನಿಮಾ ಡ್ಯಾನ್ಸ್‌ ಬಗ್ಗೆ ಮಾತನಾಡಿ ಟ್ರೋಲ್ ಆದ ನಟಿ ಪ್ರಿಯಾಂಕ ಚೋಪ್ರ