ನಿಜವಾಗಲೂ ಪ್ರಭಾಸ್ ಹಾಗೂ ಕರಣ್ ಜೋಹರ್ ನಡುವೆ ಮನಸ್ತಾಪವಿದೆಯಾ?

Webdunia
ಭಾನುವಾರ, 27 ಮೇ 2018 (07:03 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನ ಖ್ಯಾತ ನಿರ್ಮಾಪಕ , ನಿರ್ದೇಶಕ ಕರಣ್ ಜೋಹರ್ ಅವರ ನಡುವೆ ಮನಸ್ತಾಪವಿದೆ. ಅವರ ಸಂಬಂಧ ಚೆನ್ನಾಗಿಲ್ಲವೆಂಬ ಸುದ್ದಿ ಆಗಾಗ ಕೇಳಿಬಂದಿತ್ತು.ಆದರೆ ಇದೀಗ ಪ್ರಭಾಸ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಸೂಪರ್ ಹಿಟ್ ಸಿನಿಮಾ ಬಾಹುಬಲಿ ಯ ನಂತರ ಪ್ರಭಾಸ್ ಅವರು ತುಂಬಾ ಫೆಮಸ್ ಆಗಿದ್ದು, ಅವರಿಗೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಕರಣ್ ಜೋಹರ್ ಅವರು ಕೂಡ ಪ್ರಭಾಸ್ ಕಾಲ್ ಶೀಟ್ ಕೇಳಿದ್ದರು. ಆದರೆ ಪ್ರಭಾಸ್ ಅವರು ಕರಣ್ ಜೋಹರ್ ಆಫರ್ ನ ತಿರಸ್ಕರಿಸಿ 'ಸಾಹೋ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿತ್ತು. ಆದಕಾರಣ ಅವರ ನಡುವೆ ಮನಸ್ತಾಪವಿದೆ ಎಂಬ ಅನುಮಾನ ಜನರಲ್ಲಿ ಉಂಟಾಗಿದೆ.


ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಭಾಸ್ ಅವರು,’ ನನ್ನ ಹಾಗೂ ಕರಣ್ ಜೋಹರ್ ನಡುವೆ ಯಾವುದೇ ವಿಚಾರಕ್ಕೂ ಮನಸ್ತಾಪ ಇಲ್ಲ. ಈ ಸುದ್ದಿ ಕರಣ್ ಕಿವಿಗೂ ಬಿದ್ದಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಅವರೇ ನನಗೆ ಕಿವಿಮಾತು ಹೇಳಿದರು. ನಮ್ಮಿಬ್ಬರ ನಡುವೆ ಅಂಥದ್ದೇನೂ ಆಗಿಲ್ಲ. ನನಗೆ ಕರಣ್ ಜೋಹರ್ ನಿರ್ದೇಶನದ ಚಿತ್ರಗಳು ಇಷ್ಟ. 'ಕುಚ್ ಕುಚ್ ಹೋತಾ ಹೇ' ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು’ ಎಂದು ಹೇಳುವುದರ ಮೂಲಕ ಆ ಗಾಸಿಪ್ ಗೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಭಯವಿಲ್ಲದೇ ಓಡಾಡಬಹುದಾದ ಒಂದೇ ಒಂದು ರಾಜ್ಯವೆಂದರೆ ಕೇರಳ ಎಂದ ಪ್ರಕಾಶ್ ರೈ

`ಅರ್ಜುನ್ ರೆಡ್ಡಿ’ ಬಗ್ಗೆ ವಿಷಯವೇ ಗೊತ್ತಿಲ್ಲ: ಟೈಗರ್ ಪ್ರದೀಪ್

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಪತಿಯಿಂದಲೇ ಕೊಲೆಯಾದ ಪತ್ನಿ ಕೊನೆಯ ಬಾರಿಗೆ ಅಂಗಲಾಚಿದ್ದು ಏನು?!

ರಿಜಿಸ್ಟ್ರಾರ್ ಮದುವೆ ಮಾಡಿಕೊಂಡೇ ಮತ್ತೊಂದು ಮದುವೆಗೆ ಒಪ್ಪಿಕೊಂಡಿದ್ದ ಹುಡುಗಿ ಮಾಡಿದ್ದೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ