Select Your Language

Notifications

webdunia
webdunia
webdunia
webdunia

ನಾನು ಗಿಫ್ಟ್ ಕೊಡಲ್ಲ, ತೆಗೆದುಕೊಳ್ಳೋದು ಮಾತ್ರ- ಸೂರಜ್ ಪಾಂಚೋಲಿ

ನಾನು ಗಿಫ್ಟ್ ಕೊಡಲ್ಲ, ತೆಗೆದುಕೊಳ್ಳೋದು ಮಾತ್ರ- ಸೂರಜ್ ಪಾಂಚೋಲಿ
, ಸೋಮವಾರ, 31 ಆಗಸ್ಟ್ 2015 (10:56 IST)
ಮೊನ್ನೆಯಷ್ಟೇ ರಕ್ಷಾಬಂಧನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ಸಿನಿಮಾ ತಾರೆಯರು ಕೂಡ ತಮ್ಮ ನೆಚ್ಚಿನ ಸಹೋದರರಿಗೆ ರಾಖಿ ಕಟ್ಟಿ, ಭರ್ಜರಿ ಗಿಫ್ಟ್ ಗಳನ್ನು ಪಡೆದುಕೊಂಡ್ರು. ಆದ್ರೆ ನಟ ಸೂರಜ್ ಪಾಂಚೋಲಿ ಮಾತ್ರ ಎಲ್ಲರಿಗಿಂತ ಭಿನ್ನ.
 

 
ಪ್ರತಿ ವರ್ಷ ರಾಖಿ ಹಬ್ಬದಲ್ಲೂ ಸೂರಜ್ ಪಾಂಚೋಲಿಗೆ ಅವರ ಅಕ್ಕ ಸನಾ ಪಾಂಚೋಲಿ ರಾಖಿ ಕಟ್ಟುತ್ತಾರಂತೆ.ಆದ್ರೆ ಇದುವರೆಗೂ ಸೂರಜ್ ಅಕ್ಕನಿಗೆ ಯಾವುದೇ ಉಡುಗೊರೆ ನೀಡಿಲ್ಲವಂತೆ. ಬದಲಿಗೆ ಪ್ರತಿವರ್ಷವೂ ಅವರಿಂದಲೇ ಗಿಫ್ಟ್ ತೆಗೆದುಕೊಳ್ಳುತ್ತಾರಂತೆ. ಈ ವರ್ಷವೂ ಅದೇ ರೀತಿ ಮಾಡಿದ್ದಾರಂತೆ. ಆದ್ರೆ ಮುಂದಿನ ವರ್ಷ ನಾನು ಉತ್ತಮ ಸಂಪಾದನೆ ಮಾಡುತ್ತಿರುತ್ತೇನೆ. ಹಾಗಾಗಿ ನಾನೇ ಆಕೆಗೆ ಗಿಫ್ಟ್ ನೀಡುತ್ತೇನೆ ಎಂದಿದ್ದಾರೆ.
 
ನನಗೆ ಅಕ್ಕ ಉತ್ತಮ ಫ್ರೆಂಡ್ ಎಂದಿರುವ ಸೂರಜ್ ಆಕೆ ನನಗೆ ಯಾವಾಗಲೂ ರಕ್ಷಾ ಕವಚವಿದ್ದಂತೆ ಎಂದಿದ್ದಾರೆ. ಸದ್ಯ ಸೂರಜ್ ಪಾಂಟೋಲಿ ಸಲ್ಮಾನ್ ಖಾನ್ ನಿರ್ಮಾಣದ ಹೀರೋ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸಪ್ಟಂಬರ್ 11 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada